More

    ಲೋಕಸಭೆ ಚುನಾವಣೆ: ಆಸ್ತಿ ಘೋಷಣೆ ಮಾಡಿ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ!

    ಮಥುರಾ: ಬಾಲಿವುಡ್ ನಟಿ ಮತ್ತು ಎರಡು ಬಾರಿ ಬಿಜೆಪಿ ಸಂಸದ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶದ ಮಥುರಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲಿದ್ದಾರೆ. ಇವರು ಚುನಾವಣಾಧಿಕಾರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಒಟ್ಟು 123 ಕೋಟಿ ರೂಪಾಯಿಯನ್ನು ಘೋಷಿಸಿದ್ದಾರೆ.

    ಇದನ್ನೂ ಓದಿ: ಸಿಎಂ ಬೆಂಗಾವಲು ವಾಹನದ ಹಿಂದೆ ಹೋಗ್ತಿದ್ದ ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ. ವಶ

    2014, 2019ರ ಲೋಕಭೆ ಚುನಾವಣೆಯಲ್ಲಿ ಮಥುರಾದಿಂದ ಸತತ 2 ಬಾರಿ ಗೆದ್ದಿದ್ದಾರೆ. ಈ ಬಾರಿ ಮತ್ತೊಮ್ಮೆ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಚುನಾವಣಾ ಅಫಿಡವಿಟ್ ಪ್ರಕಾರ ಹೇಮಾ ಮಾಲಿನಿ ಅವರ ಒಟ್ಟು ಆಸ್ತಿ ಮೌಲ್ಯ 123 ಕೋಟಿ ರೂಪಾಯಿ. ನಟಿ ಮಾಲಿನಿ ಬಳಿ 3 ಕೋಟಿ 39 ಲಕ್ಷದ 39 ಸಾವಿರದ 307 ರೂಪಾಯಿ ಮೌಲ್ಯದ ಚಿನ್ನಾಭರಣಗಳಿವೆ. ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಒಟ್ಟು ಆಸ್ತಿ ಮೌಲ್ಯ 12,98,02,951 ರೂಪಾಯಿಯಿದೆ. 1.4 ಕೋಟಿ ಸಾಲ ಕೂಡ ಇವರ ಮೇಲಿದೆ.

    ಹೇಮಾ ಮಾಲಿನಿ ಪತಿ ನಟ ಧರ್ಮೇಂದ್ರ ಅವರ ಆಸ್ತಿ ಒಟ್ಟು 26,52,32,266 ರೂ ಆಸ್ತಿ ಹೊಂದಿದ್ದಾರೆ. ಹೇಮಾ ಮಾಲಿನಿ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಹೇಮಾ ಮಾಲಿನಿ ಕೈಯಲ್ಲಿ 13,52,865 ರೂಪಾಯಿ ನಗದು ಇದೆ. ಬ್ಯಾಂಕ್ ಖಾತೆಯಲ್ಲಿ 99,93,177 ರೂಪಾಯಿಯನ್ನು ಇಟ್ಟಿದ್ದಾರೆ.

    ಹೇಮಾ ಮಾಲಿನಿ ಅವರ ಬಳಿ 13.5 ಲಕ್ಷ ನಗದು ಮತ್ತು ಧರ್ಮೇಂದ್ರ ಡಿಯೋಲ್ ಕೈಯಲ್ಲಿ 43 ಲಕ್ಷ ನಗದು ಇದೆ. ಹೇಮಾ ಮಾಲಿನಿ ಅವರು Mercedes-Benz, Alcazar ಮತ್ತು Maruti EECO ಸೇರಿದಂತೆ 61 ಲಕ್ಷ ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಧರ್ಮೇಂದ್ರ ಡಿಯೋಲ್ ಅವರು ರೇಂಜ್ ರೋವರ್, ಮಹೀಂದ್ರ ಬೊಲೆರೊ ಮತ್ತು ಮೋಟಾರ್ ಸೈಕಲ್ ಹೊಂದಿದ್ದಾರೆ. 2004ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ನಟಿ 2014, 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಮಥುರಾದಲ್ಲಿ ಗೆದ್ದು ಬೀಗಿದ್ದರು.

    ಮಥುರಾದಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4. ಈ ದೇವಾಲಯ ನಗರವು ಏಳು ಹಂತದ ಲೋಕಸಭೆ ಚುನಾವಣೆಯ ಎರಡನೇ ಚುನಾವಣೆಯಲ್ಲಿ ಮತ ಚಲಾಯಿಸಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

    ಹ್ಯಾಟ್ರಿಕ್​ ಸೋಲು: ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts