More

    ನೆರವಿನ ಪ್ಯಾಕೇಜ್‌: ರಾಜ್ಯ ಸರ್ಕಾರದಿಂದ ಸ್ವಾಗತಾರ್ಹ ನಿರ್ಧಾರ

    ಕರೊನಾ ಸೋಂಕು ಮತ್ತು ಅದನ್ನು ನಿಯಂತ್ರಿಸಲು ವಿಧಿಸಲಾದ ಲಾಕ್​ಡೌನ್​ ಪರಿಣಾಮ ಆಥಿರ್ಕ ವ್ಯವಸ್ಥೆಗೆ ಬಲವಾದ ಪೆಟ್ಟು ಬಿದ್ದಿದೆ. ರಾಜ್ಯವೂ ವಿತ್ತೀಯ ಸಂಕಷ್ಟ ಎದುರಿಸುತ್ತಿರುವುದು ರಹಸ್ಯವೇನಲ್ಲ. ಆದರೆ, ಕರೊನಾ ಮಹಾಮಾರಿ ದೊಡ್ಡ ಮಾನವೀಯ ಸಂಕಟ ಆಗಿರುವುದರಿಂದ ಜನರ ಸಂಕಷ್ಟಗಳನ್ನು ನಿವಾರಿಸಲು ಸರಣಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ, ಕಟ್ಟಡ ನಿರ್ಮಾಣ ಸೇರಿದಂತೆ ಅಸಂಟಿತ ಕಾರ್ಮಿಕರಿಗೆ. ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಇತರ ವಲಯದ ಶ್ರಮಜೀವಿಗಳಿಗೆ ಎರಡು ಹಂತದ ನೆರವಿನ ಪ್ಯಾಕೇಜ್​ ಘೋಷಿಸಿದ್ದ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತಳೆದಿದೆ.

    ಕೋವಿಡ್​ನಿಂದ ಮೃತರಾದ ಬಡವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವ ಯೋಜನೆಯನ್ನು ಸೋಮವಾರ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಇದು ಬಿಪಿಎಲ್​ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ಅನ್ವಯವಾಗಲಿದೆ. ಕರೊನಾ ವಿರುದ್ಧ ಹೋರಾಡುತ್ತ ಪ್ರಾಣ ಕಳೆದುಕೊಂಡ ಸೇನಾನಿಗಳಿಗೆ ಈಗಾಗಲೇ ಸರ್ಕಾರದ ವತಿಯಿಂದ 30 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ, ಕೋವಿಡ್​ನಿಂದ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದಾರೆ. ಇದರಿಂದ ಕುಟುಂಬಗಳು ಸಂಕಷ್ಟಕ್ಕೆ ಈಡಾಗಿವೆ. ಹಲವು ಕುಟುಂಬಗಳು ಬೀದಿಪಾಲಾಗಿವೆ. ಈ ದಯನೀಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ “ಸಾಂತ್ವನ’ ವಿಶೇಷ ಪ್ಯಾಕೇಜ್​ನಡಿ ಪರಿಹಾರ ಒದಗಿಸಲು ಮುಂದಾಗಿದ್ದಾರೆ. 20 ಸಾವಿರ ಬಿಪಿಎಲ್​ ಕಾರ್ಡುದಾರರ ಕುಟುಂಬಗಳಿಗೆ ಸೀಮಿತವಾಗಿ ಈ ಯೋಜನೆ ಅನ್ವಯವಾಗಲಿದ್ದು, 250&300 ಕೋಟಿ ರೂ. ವೆಚ್ಚವಾಗಲಿದೆ. ಉಳಿದ ಯಾವ ರಾಜ್ಯಗಳಲ್ಲೂ ಈ ಬಗೆಯ ಪರಿಹಾರ ಘೋಷಿಸಿಲ್ಲ. ಹೀಗಾಗಿ, ದೇಶದಲ್ಲೇ ಇಂಥದ್ದೊಂದು ಯೋಜನೆ ಪ್ರಕಟಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ವಿಶೇಷ. ಈ ಮೂಲಕ ರಾಜ್ಯ ಆಥಿರ್ಕವಾಗಿ ಗಟ್ಟಿಯಾಗಿದೆ ಎಂಬ ಸಂದೇಶವನ್ನೂ ಮುಖ್ಯಮಂತ್ರಿಗಳು ರವಾನಿಸಿದ್ದಾರೆ.

    ಈ ಪರಿಹಾರ ಯೋಜನೆ ಕರೊನಾ ಎರಡೂ ಅಲೆಗಳಲ್ಲಿ ಮೃತಪಟ್ಟವರಿಗೆ ಅನ್ವಯವಾಗಲಿದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ 1 ಲಕ್ಷ ರೂ.ಪರಿಹಾರ ಸಿಗಲಿದೆ. ಆದರೂ, ಸಂಕಷ್ಟದ ಹೊತ್ತಲ್ಲಿ ದೊರೆಯುವ ಈ ಆಸರೆ ಮೃತರ ಕುಟುಂಬವರ್ಗಕ್ಕೆ ಭರವಸೆ ಮೂಡಿಸಬಲ್ಲದು. ಸದ್ಯದ ಸನ್ನಿವೇಶವನ್ನು ಎದುರಿಸಲು ಸ್ಥೆ$ರ್ಯ ತುಂಬಬಲ್ಲದು. ಸರ್ಕಾರ ಎಷ್ಟೇ ಒಳ್ಳೆಯ ಯೋಜನೆ ರೂಪಿಸಿದರೂ, ಅದನ್ನು ದುರುಪಯೋಗ ಮಾಡಿಕೊಳ್ಳುವ ಅಥವಾ ನೈಜ ಲಾನುಭವಿಗಳಿಗೆ ಸಮರ್ಪಕವಾಗಿ ತಲುಪದಂತೆ ಮಾಡುವ ದಲ್ಲಾಳಿಗಳು ಹುಟ್ಟಿಕೊಂಡು ಬಿಡುತ್ತಾರೆ. ಈ ಯೋಜನೆಯಲ್ಲಿ ಪರಿಹಾರದ ಮೊತ್ತವೂ ಹೆಚ್ಚಿರುವುದರಿಂದ ಸರ್ಕಾರ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ. ಹಣ ಮಧ್ಯವತಿರ್ಗಳ ಕೈಸೇರದಂತೆ ಅಥವಾ ದುರ್ಬಳಕೆಯಾಗದಂತೆ ಸೂಕ್ತ ಮಾರ್ಗಸೂಚಿ ಪ್ರಕಟಿಸಿ, ಅದನ್ನು ಅನುಷ್ಠಾನಕ್ಕೆ ತರಬೇಕಿದೆ. ನೈಜ ಲಾನುಭವಿಗಳು ತಪ್ಪಿ ಹೋಗದಂತೆಯೂ ಕಾಳಜಿ ವಹಿಸಬೇಕಿದೆ. ಒಟ್ಟಾರೆ, ಕೋವಿಡ್​ನಿಂದ ಕುಟುಂಬದ ಆಧಾರವನ್ನೇ ಕಳೆದುಕೊಂಡವರಿಗೆ ಈ ಯೋಜನೆಯಿಂದ ಒಂದಿಷ್ಟು ನೆರವಾಗಲಿದೆ. ಸರ್ಕಾರದ ಸಕಾಲಿಕ ನಿರ್ಣಯ ಮಾನವೀಯ ಸ್ಪಂದನೆಗೆ ಉತ್ತಮ ನಿದರ್ಶನವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts