More

    ಕೈಗೆ ಬಾರದ ಶೇಂಗಾ ಬೆಳೆ

    ಮೊಳಕಾಲ್ಮೂರು: ಭರ್ಜರಿ ಮಳೆ 12 ವರ್ಷದ ಬರ ಮರೆಸಿದೆ. ಆದರೂ ಪ್ರಧಾನ ಬೆಳೆ ಶೇಂಗಾ ಮಾತ್ರ ಕೈಗೆ ಸಿಗದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ.

    ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದ 27,080 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ನಂತರ ಸೆಪ್ಟಂಬರ್‌ನಲ್ಲಿ ಹೂ ಕಟ್ಟುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕರಿ ಜಡಿ ಹುಳು ಬಾಧೆ ಕಾಡಿತು. ಆನಂತರ ನಿರಂತರವಾಗಿ ಸುರಿದ ಮಳೆಯಿಂದ ತೇವಾಂಶ ಜಾಸ್ತಿಯಾಗಿ ಗಿಡಗಳು ಕಾಯಿ ಕಡಿಮೆ ಕಟ್ಟಿವೆ.

    ಒಂದು ಗಿಡಕ್ಕೆ ಗರಿಷ್ಠ ಆರೇಳು ಕಾಯಿ ಕಟ್ಟಿದೆ. ಇದರಿಂದ ರೈತ ಖರ್ಚು ಮಾಡಿರುವ ಬೀಜದ ಹಣವು ಕೈಸೇರದ ದುಸ್ಥಿತಿ ಬಂದೊದಗಿದೆ. ಎಕರೆಗೆ ಕನಿಷ್ಠ 18-20 ಚೀಲ ಕಾಯಿ ಇಳುವರಿ ಬರಬೇಕಿತ್ತು. ಐದಾರು ಚೀಲ ಫಸಲು ಸಿಗುವುದು ಕಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

    ಜೀವನೋಪಾಯಕ್ಕಾಗಿ ಕೂಲಿ ಅರಸಿ ನಗರ-ಪಟ್ಟಣಗಳಿಗೆ ವಲಸೆ ಹೋಗಿದ್ದ ಜನ ಕರೊನಾ ಕಾರಣಕ್ಕೆ ತವರೂರು ಸೇರಿದ್ದರು. ಕೆಲವರು ಇಷ್ಟು ದಿನ ಪಾಳು ಬಿದ್ದ ಜಮೀನುಗಳನ್ನು ಉಳುಮೆ ಮಾಡಿ ಶೇಂಗಾ ಬಿತ್ತನೆ ಮಾಡಿದ್ದರು. ಕಳೆದ ವರ್ಷಕ್ಕಿಂತ 6 ಸಾವಿರ ಹೆಕ್ಟೇರ್ ಹೆಚ್ಚುವರಿ ಪ್ರದೇಶದಲ್ಲಿ ಬಿತ್ತನೆಯಾಗಿದೆ.

    ಮೊಳಕಾಲ್ಮೂರು ತಾಲೂಕಿನಲ್ಲಿರುವ 32500 ಹೆಕ್ಟೇರ್ ಪೈಕಿ ಬರೋಬ್ಬರಿ 27 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಅತಿವೃಷ್ಟಿಯಿಂದ ಶೇ.33ರಿಂದ 50ರಷ್ಟು ಬೆಳೆ ನಷ್ಟವಾಗಿದೆ. ಅತಿವೃಷ್ಟಿ ಪ್ರದೇಶ ಎಂದು ಸರ್ಕಾರ ಈಗಾಗಲೆ ಘೋಷಿಸಿದ್ದು, ಬೆಳೆ ಹಾನಿ ಆನ್‌ಲೈನ್ ಸರ್ವೇ ಮಾಡಿ ವರದಿ ಕಳಿಸಲಾಗುವುದು ಎಂದು ಕೃಷಿ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts