More

    ಕೇರಳದಲ್ಲಿ 24 ಗಂಟೆಯೊಳಗೆ ಸುರಿದ ದಾಖಲೆಯ ಮಳೆ: ಮೇ 31ರವರೆಗೆ ಭಾರೀ ಮಳೆ, ಮುನ್ಸೂಚನೆ

    ಕೊಚ್ಚಿನ್​: ಮಾನ್ಸೂನ್​ ಪ್ರವೇಶಕ್ಕೂ ಮುನ್ನವೇ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಕಳೆದ 24 ಗಂಟೆಯೊಳಗೆ ದಾಖಲೆಯ ಮಳೆ ಬಿದ್ದಿದೆ. ಇನ್ನು ಮಾಸಾಂತ್ಯದವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಪಶ್ಚಿಮ ತಟದಲ್ಲಿ ಮಾನ್ಸೂನ್​ ಮಾರುತಗಳು ಬೀಸುತ್ತಿದ್ದು, ಕೇರಳಕ್ಕೆ ಅಪ್ಪಳಿಸುವ ಮುನ್ನವೇ ಮುಂದಿನ 24 ಗಂಟೆಯೊಳಗೆ ಭಾರೀ ಮಳೆ ಬೀಳಲಿದೆ ಎಂದು ಕಟ್ಟೆಚ್ಚರ ನೀಡಿದೆ.

    ಸಮುದ್ರದಲ್ಲಿ ಮೀನುಗಾರರು ಇಳಿಯದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲಫುಜ್ಜಾದಲ್ಲಿ ಶನಿವಾರ 158 ಮಿಮೀ ದಾಖಲೆ ಮಳೆಯಾಗಿದ್ದು, ಇನ್ನೂ ಕೊಲ್ಲಂ 115, ಕೊಚ್ಚಿ 150, ಕೊಟ್ಟಾಯಂ 59, ಕೋಜಿಖೋಡೆ 35, ಕುಮಾಕುಂ 111, ಪಾಲಕ್ಕಾಡ್​ 95, ತಿರುವನಂತಪುರಂ 106ಮತ್ತು ತಿರುವನಂತಪುರಂನಗರದಲ್ಲಿ 125ಮಿಮೀ ದಾಖಲೆಯ ಮಳೆಯಾಗಿದೆ.

    ಕಳೆದ ಒಂದು ತಿಂಗಳಲ್ಲಿ ಸುರಿದ ಮಳೆ ಶೇ.73ರಷ್ಟಾಗಿದ್ದು, ಈ ಬಾರಿ ಮಳೆ ಹೀಗೆ ಮುಂದುವರಿದರೆ ಪ್ರವಾಹ ಭೀತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈ ನಡುವೆ ಸಮುದ್ರದಲ್ಲಿ ಚಂಡಮಾರುತ ಅಲೆಗಳು ಕೂಡ ಬೀಸಲಿದ್ದು, ಮೇ 21ರವರೆಗೆ ಮಳೆಯಾಗಲಿದೆ ಎಂದು ಹೇಳಿದೆ. (ಏಜೆನ್ಸೀಸ್​)

    ಗಂಡನ ಜತೆ ಜಗಳವಾಡಿ ಕೆರೆ ಮಧ್ಯೆ ಸಾಯ್ತೀನಿ ಅಂತ ಕುಳಿತ ಮಹಿಳೆ! ಮುಂದೇನಾಯ್ತು?

    ಪಾರ್ಕ್ ನಲ್ಲಿ ನಗ್ನವಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ಸೆರೆ: ಹಿಡಿಯಲು ಬಂದ ಪೊಲೀಸರ ಮೇಲೆಯೇ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts