More

    ಜಿಲ್ಲೆಯಲ್ಲಿ 121 ಮನೆಗಳಿಗೆ ಹಾನಿ. ವಿಪತ್ತು ನಿರ್ವಹಣೆಗೆ 3 ಕೋಟಿ ಅನುದಾನ ಲಭ್ಯ

    ಶಿವಾನಂದ ಹಿರೇಮಠ ಗದಗ
    ಆರಂಭದಲ್ಲಿ ಸುರಿಯದ ಮುಂಗಾರು ಮಳೆ ಕಳೆದೆರೆಡು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿದ್ದು, ಜಿಲ್ಲೆಯಲ್ಲಿ 121 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಆಯಾ ತಾಲೂಕು ತಹಸೀಲ್ದಾರ ಮೂಲಕ ಹಾನಿ ಉಂಟಾದ ಮನೆಗಳ ಸಮೀೆ ನಡೆಸಲಾಗುತ್ತಿದ್ದು, ಜಿಲ್ಲಾಡಳಿತ ಪ್ರತಿನಿತ್ಯ ವರದಿ ಪಡೆಯುತ್ತಿದೆ. ಕೇವಲ ಮಳೆಯಿಂದ ಅಷ್ಟೇ ಅಲ್ಲದೇ ಮಲಪ್ರಭಾ ಮತ್ತು ತುಂಗಭದ್ರ ಪ್ರವಾಹದಿಂದ ಆಪತ್ತು ಎದುರಿಸಬಹುದಾದ ನದಿ ಪಾತ್ರದ ಹಳ್ಳಿ ಜನರಿಗೆ ಜಿಲ್ಲಾ ಆಡಳಿತ ಎಚ್ಚರಿಕೆ ನೀಡಿದ್ದು, ಸುರತ ಸ್ಥಳಕ್ಕೆ ರವಾನೆ ಆಗುವಂತೆ ಮುನ್ಸೂಚನೆ ನೀಡಿದೆ. ಪ್ರಸಕ್ತ ವಿಪತ್ತು ನಿರ್ವಹಣೆಗೆ(ಅತೀವೃಷ್ಟಿ, ಅನಾವೃಷ್ಟಿ) ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 3 ಕೋಟಿ ಅನುಧಾನ ಲಬ್ಯವಿದ್ದು ಪರಿಹಾರ ವಿತರಿಸಲು ಅನುದಾನದ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

    25ಗ್ರಾಪಂ ಗೆ ಅತೀವೃಷ್ಟಿ ಸಂಭವ:
    ಜಿಲ್ಲೆಯಲ್ಲಿ ಬೆಣ್ಣೆಹಳ್ಳ, ಮಲಪ್ರಭ, ತುಂಗಭದ್ರ ನದಿ ದಡದಲ್ಲಿ ಇರುವ 25 ಗ್ರಾಪಂ ವ್ಯಾಪ್ತಿಯ 53 ಹಳ್ಳಿಗಳಲ್ಲಿ ಅತೀವೃಷ್ಟಿ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಮಲಪ್ರಭಾ, ಬೆಣ್ಣೆಹಳ್ಳ ತೀರದ ನರಗುಂದ ಮತ್ತು ರೊಣ ತಾಲೂಕಿನಲ್ಲಿ ತಲಾ 16 ಹಳ್ಳಿಗಳನ್ನು ಮತ್ತು ತುಂಗಭದ್ರ ನದಿ ತೀರದ ಮುಂಡರಗಿ ತಾಲೂಕಿನಲ್ಲಿ 11 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 10 ಹಳ್ಳಿಗಳನ್ನು ಗುರುತಿಸಲಾಗಿದೆ. ವಿಪತ್ತು ನಿರ್ವಹಿಸಲು ಸಮಿತಿ ರಚಿಸಲಾಗಿದ್ದು, ಜಿಲ್ಲಾ ಮಟ್ಟದ ಪ್ರವಾಹ ಸಮಿತಿಯನ್ನು ರಚಿಸಲಾಗಿದೆ. 56 ಕಾಳಜಿ ಕೇಂದ್ರಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ. ಇದರೊಂದಿಗೆ ಸಹಾಯವಾಣಿ ಕೇಂದ್ರ ತೆರೆಲಾಗಿದ್ದು, 24 ಗಂಟೆಗಳ ಕಾಲ ಸಿಬ್ಬಂದಿ ನಿಯೋಜಿಸಲಾಗಿದೆ.

    ಪರಿಹಾರ ಮೊತ್ತ:ಮುಂಗಾರಿನಲ್ಲಿ ಬೆಳೆ ನಷ್ಟ, ಮಾನವ ಹಾನಿ ಮತ್ತು ಜಾನುವಾರು ಹಾನಿಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗದಿಂದ ನೇರವಾಗಿ ಲಾನುಭವಿ ಖಾತೆಗೆ ಹಣ ಜಮೆ ಆಗಲಿದೆ. ಬೆಳೆ ನಷ್ಟ ಸಂಭವಿಸಿದ ಪ್ರತಿ ಹೆಕ್ಟೇರ್​ ಖುಷ್ಕಿ ಭೂಮಿಗೆ 13600 ರೂ, ನೀರಾವರಿ ಭೂಮಿಯ ಪ್ರತಿ ಹೆಕ್ಟೇರ್​ ಗೆ 25000ರೂ, ಬಹುವಾಷಿರ್ಕ ಬೆಳೆಗಳ ನಾಶಕ್ಕೆ ಪ್ರತಿ ಹೆಕ್ಟೇರ್​ ಗೆ 28000 ರೂ, ಹೈನುಗಾರಿಕೆ ಜಾನುವಾರುಗಳ ಹಾನಿಗೆ 37500, ಎತ್ತು, ಕೋಣ ಇತ್ಯಾಗಿ ಪ್ರಾಣಿ ಹಾನಿಗೆ 32000 ರೂ, ಮತ್ತು ಆಡು ಕುರಿ ಹಾನಿಗೆ 4000 ರೂ. ಗಳನ್ನು ಎನ್​ಡಿಆರ್​ಎ್​ ಮತ್ತು ಎಸ್​ಡಿಆರ್​ಎ್​ ಅನುದಾನದಲ್ಲಿ ರೈತರಿಗೆ ಜಿಲ್ಲಾಡಳಿತ ವಿತರಿಸಲಿದೆ. ಜಿಲ್ಲೆಯಲ್ಲಿ ಈ ವರೆಗೆ 1 ಜಾನುವಾರು ಹಾನಿ, 121 ಮನೆಗಳಿಗೆ ಬಾಗಶಃ ಹಾನಿ ಸಂಭವಿಸಿ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗಿದೆ.

    ಮನೆಗಳಿಗೆ ಹಾನಿ
    ತಾಲೂಕು – ಮನೆ ಸಂಖ್ಯೆ – ಪರಿಹಾರ ಮೊತ್ತ(ಲಕ್ಷಗಳಲ್ಲಿ)
    ಗದಗ – 45 – 1.80
    ಗಜೇಂದ್ರಗಡ – 11- 0.44
    ಲೆ$್ಮಶ್ವರ – 25 – 1.00
    ಮುಂಡರಗಿ – 5 – 0.20
    ನರಗುಂದ – 13 – 0.52
    ರೋಣ – 4 – 0.16
    ಶಿರಹಟ್ಟಿ – 18 – 0.72

    ಕೋಟ್​:
    ಸಿಎಂ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಪತ್ತು ನಿರ್ವಹಣೆ ಕುರಿತು ಸಭೆ ನಡೆಸಲಾಗಿದೆ. ಪ್ರವಾಹ ಸಂದರ್ಭದಲ್ಲಿ ಮಾನವ ಜೀವಹಾನಿ, ಜಾನುವಾರುಗಳ ಜೀವಹಾನಿ, ಸಾರ್ವಜನಿಕರ ಆಸ್ತಿ ರಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ನಿರ್ದೇಶನ ಕೊಡಲಾಗಿದೆ. ಶೀಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಸುರತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.

    – ಎಚ್​.ಕೆ. ಪಾಟೀಲ. ಸಚಿವರು

    ===

    ರಾಜ್ಯದಲ್ಲಿ 2682 ಮನೆಗಳ ಭಾಗಶಃ ಕುಸಿತ:
    ಮುಂಗಾರಿಗೆ ಈ ವರೆಗೂ ರಾಜ್ಯದಲ್ಲಿ 38 ಮಾನವ ಜೀವಹಾನಿಯಾಗಿದ್ದು, 57 ಮನೆಗಳು ಸಂರ್ಪೂಣವಾಗಿ ಕುಸಿದಿವೆ. 2682 ಮನೆಗಳು ಭಾಗಶಃ ಕುಸಿದಿವೆ. 185 ಹೆಕ್ಟೇರ್​ ಕೃಷಿ ಬೆಳೆ ಹಾಗೂ 356 ಹೆಕ್ಟೇರ್​ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಸೇರಿದಂತೆ ಒಟ್ಟಾರೆ 541.39 ಹೆಕ್ಟೇರ್​ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts