More

    ಮಳೆಯಿಂದ ವಿವಿಧೆಡೆ ಜಲಾವೃತ, ಗುಡ್ಡ ಕುಸಿತ

    ಕಾರವಾರ:ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಮಳೆ ಮುಂದುವರಿದಿದೆ. ಕಾರವಾರ, ಭಟ್ಕಳ, ಹೊನ್ನಾವರ ಹಾಗೂ ಕುಮಟಾದಲ್ಲಿ ಇದರಿಂದ ಹಲವೆಡೆ ನೀರು ತುಂಬಿ ಅನಾಹುತಗಳು ಸಂಭವಿಸಿವೆ. ಕೆಲವೆಡೆ ಗುಡ್ಡ ಕುಸಿತವಾಗಿದೆ.
    ಅರಗಾದಲ್ಲಿ ಮನೆಯಂಗಳದಲ್ಲಿ ತುಂಬಿದ್ದ ನೀರಿನಲ್ಲಿ ಜಾರಿ ಬಿದ್ದ ವೃದ್ಧೆ ತಾರಾಬಾಯಿ(81) ಮೃತಪಟ್ಟಿದ್ದಾರೆ. ಅವರು ಏಕಾಂಗಿಯಾಗಿ ಇರುತ್ತಿದ್ದರು. ಸಂಬಂಧಿಕರೂ ಸಮೀಪದಲ್ಲಿರಲಿಲ್ಲ. ಗ್ರಾಮೀಣ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಅತಿವೃಷ್ಟಿಯಿಂದ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಪರಿಗಣಿಸಿಲ್ಲ.
    ಕೃತಕ ನೆರೆ:
    ಸೀಬರ್ಡ್ ನೌಕಾನೆಲೆ ಭಾಗದಲ್ಲಿ ವಿವಿಧ ಕಾಮಗಾರಿ ನಡೆದಿದ್ದು, ಗುಡ್ಡದ ಮೇಲಿಂದ ಬರುವ ನೀರು ಸಮುದ್ರಕ್ಕೆ ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ತಾಲೂಕಿನ ಅರಗಾ, ಚೆಂಡಿಯಾ ಭಾಗದಲ್ಲಿ ಮಂಗಳವಾರ ರಾತ್ರಿ ನೀರು ತುಂಬಿತ್ತು. ಈಡೂರು ಭಾಗದಲ್ಲಿ 5 ಮನೆಗಳ ಅಂಗಳದವರೆಗೂ ನೀರು ನುಗ್ಗಿದ್ದು, ಜನ ಮನೆಗಳಿಂದ ಹೊರಗೆ ಬರದಂತಾಗಿದೆ. ಅರಗಾದಲ್ಲಿ 6 ಮನೆಗಳಿಗೆ ನೀರು ಬಂದಿದೆ.
    ಜಲಾವೃತವಾದ ಬಸ್ ಡಿಪೋ:
    ನಗರದ ಹಬ್ಬುವಾಡ ಎನ್‌ಡಬ್ಲುಕೆಆರ್‌ಟಿಸಿ ಬಸ್ ಡಿಪೋ ಜಲಾವೃತವಾಗಿದ್ದು, ಬಸ್‌ಗಳ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಯಿತು. ಅಲ್ಲದೆ, ಕಟ್ಟಡ ಕೂಡ ಹಳೆಯದಾಗಿದ್ದು, ಸೋರುತ್ತಿದೆ. ಮುರಿದು ಬೀಳುವ ಪರಿಸ್ಥಿತಿಯಲ್ಲಿದೆ. ಸಿಬ್ಬಂದಿ ಆತಂಕದಲ್ಲೇ ಕಾರ್ಯನಿರ್ವಹಣೆ ಮಾಡಬೇಕಾಯಿತು.

    :ಇದನ್ನೂ ಓದಿ:ರಾತ್ರಿ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಅಧಿಕ: ಸಂಶೋಧನೆ

    ನಗರದ ಎಂಜಿ ರಸ್ತೆ, ಜಿಪಂ ಪ್ರದೇಶಗಳು, ಹಬ್ಬುವಾಡ ರಸ್ತೆ ಸೇರಿ ವಿವಿಧೆಡೆ ರಾತ್ರಿ ನೀರು ನಿಂತಿದ್ದರಿAದ ಪಕ್ಕದ, ಅಂಗಡಿ, ಮನೆ, ಕಚೇರಿಗಳಿಗೆ ಮಂಗಳವಾರ ರಾತ್ರಿ ನೀರು ನುಗ್ಗಿತ್ತು. ಬೆಳಗಿನ ಹೊತ್ತಿಗೆ ಇಳಿದು ಹೋಗಿದೆ.
    ಇಂದೂ ರೆಡ್ ಅಲರ್ಟ್:
    ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಅವಽಯಲ್ಲಿ ಸರಾಸರಿ 55.3 ಮಿಮೀ ಮಳೆಯಾಗಿದೆ. ಭಟ್ಕಳದ ಮುಂಡಳ್ಳಿಯಲ್ಲಿ ಅತ್ಯಽಕ ಎಂದರೆ 193 ಮಿಮೀ ಮಳೆಯಾಗಿದೆ. ಜು.6 ರಂದೂ ಮಳೆ ಮುಂದುವರಿಯಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
    ಬುಧವಾರ ಬೆಳಗಿನ ವರದಿಯಂತೆ ಅಂಕೋಲಾ-71.1, ಭಟ್ಕಳ-184,ಹೊನ್ನಾವರ-177.1, ಕಾರವಾರ-177.6, ಕುಮಟಾ-116.9, ದಾಂಡೇಲಿ-23, ಹಳಿಯಾಳ-15.8, ಜೊಯಿಡಾ-19.4, ಮುಂಡಗೋಡ-18.2, ಸಿದ್ದಾಪುರ-55.4, ಶಿರಸಿ-23, ಯಲ್ಲಾಪುರ-25.6 ಮಿಮೀ ಮಳೆಯಾಗಿದೆ.


    ಗುಡ್ಡ ಕುಸಿಯುವ ಭೀತಿ

    Land-Slide-in-Chendiya


    ಸೀಬರ್ಡ್ ನೌಕಾ ಯೋಜನೆಗಾಗಿ ನಾಗಾರ್ಜುನ ಕಂಪನಿಯು ಚೆಂಡಿಯಾದಲ್ಲಿ ರಸ್ತೆ ನಿರ್ಮಾಣ ಕಾರ್ಯ ಮಾಡುತ್ತಿದೆ. ಸುಮಾರು 10 ಅಡಿಗೂ ಹೆಚ್ಚು ಧರೆಯನ್ನು ಅಗೆಯಲಾಗಿದೆ. ಬುಧವಾರ ಪೋಸ್ಟ್ ಚೆಂಡಿಯಾ ಅಲ್ಪ ಬಳಿ ಈ ಕಾಮಗಾರಿ ನಡೆದ ಸ್ಧಳದಲ್ಲಿ ಧರೆ ಕುಸಿತ ಉಂಟಾಗಿದೆ. ಧರೆ ಬುಡದಲ್ಲಿ ಸುಮಾರು 14 ಮನೆಗಳಿದ್ದು, ಯಾವುದೇ ಸಂದರ್ಭದಲ್ಲೂ ಮಣ್ಣು ಕುಸಿದು ಮನೆಗಳಿಗೆ ಹಾನಿಯಾಗುವ ಆತಂಕವಿದೆ. ಪಿಡಿಒ ನಾಗೇಶ್ವರ ತೆಂಡುಲ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚೆಂಡಿಯಾ ನ್ಯೂ ಹೈಸ್ಕೂಲ್‌ನಲ್ಲಿ ಕಾಳಜಿ ಕೇಂದ್ರ ತೆರೆದಿರುವುದಾಗಿ ತಿಳಿಸಿದ್ದಾರೆ. ರಾತ್ರಿ ಹೊತ್ತಿಗೆ ಈ ಮನೆಗಳ ಜನ ಕಾಳಜಿ ಕೇಂದ್ರಕ್ಕೆ ಬಂದು ಉಳಿಯುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ-ಬಿಣಗಾ ನಡುವಿನ ಸುರಂದದ ಸಮೀಪ ಧರೆ ಕುಸಿಯುವ ಹಂತದಲ್ಲಿದೆ. ಸುರಂಗದ ದ್ವಾರದಲ್ಲೇ ಗುಡ್ಡದಿಂದ ದೊಡ್ಡ ಝರಿಯಂತೆ ನೀರು ಹರಿದು ಬರುತ್ತಿದೆ. ಕಲ್ಲುಗಳು ಅಪಾಯಕಾರಿ ನಿಂತಿದ್ದು, ಯಾವುದೇ ಕ್ಷಣದಲ್ಲೂ ಬೀಳುವ ಆತಂಕವಿದೆ.

    Landslide near tennul


    ನೀರು ಹರಿದು ಹೋಗುವ ಮಾರ್ಗಗಳು ನೌಕಾನೆಲೆಯ ವ್ಯಾಪ್ತಿಯಲ್ಲಿ ಬಂದಾಗಿರುವಂತಿವೆ. ಅಲ್ಲದೆ, ಸಮುದ್ರ ಉಬ್ಬರದ ಸಮಯವಿದ್ದಿದ್ದರಿಂದ ಅರಗಾ, ಚೆಂಡಿಯಾ ಈಡೂರು ಭಾಗದಲ್ಲಿ ಕೆಲವೆಡೆ ಮಂಗಳವಾರ ರಾತ್ರಿ ನೀರು ನಿಂತಿತ್ತು. ಜೆಸಿಬಿ ನಳಸಿ ನೀರು ಸಮರ್ಪಕವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಸೀಬರ್ಡ್ ನೌಕಾ ಯೋಜನೆಯ ವ್ಯಾಪ್ತಿಯೊಳಗೆ ನಮಗೆ ಪ್ರವೇಶವಿಲ್ಲ. ಇದರಿಂದ ನೀರು ಹರಿಯುವ ವ್ಯವಸ್ಥೆ ಮಾಡಿಸಿಕೊಡುವಂತೆ ವ್ಯವಸ್ಥೆ ಮಾಡಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗುವುದು.
    ನಿಶ್ಚಲ ನರೋನಾ
    ತಹಸೀಲ್ದಾರ್, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts