More

    ವಿದ್ಯುತ್ ತಂತಿ ಮೇಲೆ ಬಿದ್ದ ಮರ, ಬಡ್ತನಬೈಲ್ನಲ್ಲಿ ಸಂಚಾರ ಅಸ್ತವ್ಯಸ್ತ

    ಹೆಬ್ರಿ: ತಾಲೂಕಿನ ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ರಿ ಮತ್ತು ಸಿದ್ದಾಪುರ ಸಂಪರ್ಕಿಸುವ ರಸ್ತೆಯ ಬಡ್ತನಬೈಲ್ನಲ್ಲಿ ಬೃಹತ್ ಮರವೊಂದು ಗುರುವಾರ ರಸ್ತೆಗೆ ಅಡ್ಡವಾಗಿ ವಿದ್ಯುತ್ ತಂತಿ ಮೇಲೆ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬಳಿಕ ಮೆಸ್ಕಾಂ ಇಲಾಖೆಯ ಇಂಜಿನಿಯರ್ ಲಕ್ಷ್ಮೀಶ್ ಮತ್ತು ಇತರ ಸಿಬ್ಬಂದಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

    ಆದರೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಬಡ್ತನಬೈಲ್ನಿಂದ ಹಾಲಿಕೋಡ್ಲು ತನಕ ರಸ್ತೆ ಬದಿ ಅಪಾಯಕಾರಿ ಮರಗಳು ಬೆಳೆದಿದ್ದು, ಹಲವು ಬಾರಿ ಸಾರ್ವಜನಿಕರು ಲಿಖಿತ ಮತ್ತು ಮೌಖಿಕ ರೂಪದಲ್ಲಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದು ಮೆಸ್ಕಾಂ ವ್ಯಾಪ್ತಿಗೆ ಸಂಬಂಧಪಟ್ಟದ್ದು ಎನ್ನುತ್ತಾರೆ. ಮೆಸ್ಕಾಂ ಅಧಿಕಾರಿಗಳು ಕೇಳಿದರೆ ಅರಣ್ಯ ಇಲಾಖೆಯ ಜವಾಬ್ದಾರಿ ಎಂದು ನುಣುಚಿಕೊಳ್ಳುತ್ತಾರೆ. ಈ ಕುರಿತು ವಿಜಯವಾಣಿ ವರದಿ ಪ್ರಕಟಿಸಿ ಸಮಸ್ಯೆ ತೆರೆದಿಟ್ಟಿತ್ತು. ಈಗ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ತಂತಿ ಮೇಲೆ ಮರ ಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಪಾಯಕಾರಿ ಮರ ತೆರವುಗೊಳಿಸಲು ಹಲವು ಬಾರಿ ಎರಡೂ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದೇವೆ. ಸಮಸ್ಯೆ ಕುರಿತು ವಿಜಯವಾಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಆದರೂ ಕ್ರಮಕೈಗೊಳ್ಳದೆ ಇಲಾಕೆಗಳು ಬೇಜಾಬ್ದಾರಿಯಿಂದ ವರ್ತಿಸಿವೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳಿಂದ ಜೀವ ಹಾನಿಯಾದರೆ ಇಲಾಖೆಗಳೇ ನೇರ ಹೊಣೆ.
    ಶ್ರೀಕಾಂತ್ ಪೂಜಾರಿ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts