More

    ಮಳೆಗೆ ಮನೆ ಗೋಡೆ ಕುಸಿತ

    ಚಾಮರಾಜನಗರ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾನುವಾರ ಸುರಿದ ಭಾರಿ ಮಳೆಯಿಂದ ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿದೆ.
    ಗ್ರಾಮದ ಮಹದೇವಮ್ಮ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿ ಕುಡಿಯುವ ನೀರಿಲ್ಲದ ಕಾರಣ ಮಹದೇವಮ್ಮ ಮಳೆ ಬರುತ್ತಿದ್ದರೂ ನೀರು ತರಲು ಹೊರಗೆ ಹೋಗಿದ್ದರು. ಈ ವೇಳೆ ಮನೆ ಕುಸಿದು ಬಿದ್ದಿರುವುದರಿಂದ ಅಪಾಯ ತಪ್ಪಿದೆ. ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಧಾರಾಕಾರವಾಗಿ ಸುರಿದಿದೆ. ಚಾಮರಾಜನಗರದ ಭೀಮಹಳ್ಳಿಯಲ್ಲಿ 75 ಮಿ.ಮೀ, ಸಂತೇಮರಹಳ್ಳಿಯಲ್ಲಿ 59 ಮಿ.ಮೀ, ಇರಸವಾಡಿಯಲ್ಲಿ 51 ಮಿ.ಮೀ, ಉಮ್ಮತ್ತೂರಿನಲ್ಲಿ 48 ಮಿ.ಮೀ, ಮಸಣ ಪುರದಲ್ಲಿ 32 ಮಿ.ಮೀ ಮಳೆಯಾಗಿದೆ. ಕೊಳ್ಳೇಗಾಲದ ದೊಡ್ಡಾಲತ್ತೂರಿನಲ್ಲಿ 49 ಮಿ.ಮೀ ಯಳಂದೂರಿನ ಪಟ್ಟಣದಲ್ಲಿ 65 ಮಿ.ಮೀ, ಹೊನ್ನೂರಿನಲ್ಲಿ 82 ಮಿ.ಮೀ, ದುಗ್ಗಹಟ್ಟಿಯಲ್ಲಿ 69 ಮಿ.ಮೀ, ಮದ್ದೂರು 70.5 ಮಿ.ಮೀ, ಯರಗಂಬಳ್ಳಿಯಲ್ಲಿ 57 ಮಿ.ಮೀ, ಗುಂಬಳ್ಳಿಯಲ್ಲಿ 49 ಮಿ.ಮೀ ಗುಂಡ್ಲುಪೇಟೆಯ ಬೀರಂಬಡಿ 22 ಮಿ.ಮೀ, ಭೀಮನಹಳ್ಳಿಯಲ್ಲಿ ಮಿ.ಮೀ ಮಳೆ ಬಿದ್ದಿದೆ.

    ಯಳಂದೂರು: ಯಳಂದೂರು ಸೇರಿದಂತೆ ವಿವಿಧೆಡೆ ಸಂಜೆ 4 ಗಂಟೆ ಸಮಯದಲ್ಲಿ ಆರಂಭವಾದ ಮಳೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪಟ್ಟಣದ ಗೌತಮ್ ಬಡಾವಣೆ, ಕುಂಬಾರಗುಂಡಿ, ಬಳೇಪೇಟೆಯ ಹಳ್ಳದ ಬೀದಿಯಲ್ಲಿ ಕೆಲವೆಡೆ ಚರಂಡಿಯಲ್ಲಿ ಹೂಳು ತುಂಬಿ ರುವುದರಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಈ ಬಾರಿ ಮುಂಗಾರು ಆರಂಭಗೊಂಡ ನಂತರ ಮೊದಲ ಜೋರು ಮಳೆ ಇದಾಗಿದ್ದು , ರೈತರಲ್ಲಿ ಹರ್ಷ ಮೂಡಿಸಿದೆ. ತಾಲೂಕಿನ ದುಗ್ಗಹಟ್ಟಿ, ಅಂಬಳೆ, ಕಂದಹಳ್ಳಿ, ಯರಿಯೂರು, ಮದ್ದೂರು, ಉಪ್ಪಿನಮೋಳೆ ಸೇರಿದಂತೆ ಹಲವು ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts