More

  ಆರೋಗ್ಯ ಯೋಜನೆ ಅನುಷ್ಠಾನಕ್ಕೆ ಬದ್ಧ- ಸಂಸ್ಥೆ ಅಧ್ಯಕ್ಷ ಜಿ.ರಾಮಕೃಷ್ಣ ಹೇಳಿಕೆ

  ಗಂಗಾವತಿ: ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯ ಸ್ವಾಸ್ಥೃಕ್ಕಾಗಿ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ಜಿ.ರಾಮಕೃಷ್ಣ ಹೇಳಿದರು.

  ಇದನ್ನೂ ಓದಿ: ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅಗತ್ಯ

  ನಗರದ ಸಿಬಿಎಸ್ ಕಲ್ಯಾಣ ಮಂಟಪದ ಯಾತ್ರಿ ನಿವಾಸದಲ್ಲಿ ರೋಟರಿ ಕ್ಲಬ್, ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಮಾರುತಿ ಕಣ್ಣಿನ ಆಸ್ಪತ್ರೆ ಮತ್ತು ಕೆಎಸ್‌ಆಸ್ಪತ್ರೆ ಜಂಟಿಯಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದೆ ಶಿಬಿರ ಆಯೋಜನೆಗೆ ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡಲಾಗಿತ್ತು. ಮೊದಲ ಬಾರಿಗೆ ನಗರ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಸರ್ಕಾರದ ಆರೋಗ್ಯ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.

  ಶಿಬಿರದಲ್ಲಿ ಹೃದಯ, ನರ, ಕ್ಯಾನ್ಸರ್ ರೋಗಗಳನ್ನು ತಪಾಸಿಸಿ ಚಿಕಿತ್ಸೆಗೆ ಸಲಹೆ ನೀಡಲಾಯಿತು. ರಕ್ತ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ನಡೆಸಲಾಯಿತು. 200ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

  ಕ್ಲಬ್ ಅಧ್ಯಕ್ಷ ಸದಾನಂದ ಶೇಟ್, ಹಿರಿಯ ಸದಸ್ಯರಾದ ಅಜಿತ್‌ರಾಜ್ ಸುರಾನ್, ಜೆ.ನಾಗರಾಜ್, ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಎಸ್ಡಿಎಂ ಆಸ್ಪತ್ರೆ ಸಂಪರ್ಕಾಧಿಕಾರಿ ರಹೀಂ, ಇನ್ನರ್‌ವ್ಹೀಲ್ ಕ್ಲಬ್ ತಾಲೂಕು ಅಧ್ಯಕ್ಷೆ ಎಂ.ಪ್ರಿಯಾಕುಮಾರಿ, ಕಾರ್ಯದರ್ಶಿ ಹಿಮಾರೆಡ್ಡಿ ಸತ್ತಿ ಇತರರಿದ್ದರು.

  See also  ನೀರಾವರಿ ಯೋಜನೆಗಳು ಜಾರಿಯಾಗಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts