More

    ಹೆಸ್ಕಾಂ ಸಿಬ್ಬಂದಿಯ ಆರೋಗ್ಯ ತಪಾಸಣೆ

    ಧಾರವಾಡ: ಭಾರತೀಯ ವೈದ್ಯಕೀಯ ಸಂಘ ಹಾಗೂ ಐ.ಎಂ.ಎ ಮಹಿಳಾ ಘಟಕ ಮತ್ತು ಐ.ಡಿ.ಎ.ಡಿ.ಡಿಎ ವತಿಯಿಂದ ನಗರದ ವಿದ್ಯಾಗಿರಿಯ ಹೆಸ್ಕಾಂ ಕಚೇರಿ ಆವರಣದಲ್ಲಿ ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಶುಕ್ರವಾರ ಆಯೋಜಿಸಲಾಗಿತ್ತು.
    ಶಿಬಿರದಲ್ಲಿ ಉಚಿತ ರಕ್ತ ಮತ್ತು ಮಧುಮೇಹ ತಪಾಸಣೆ, ಎಲುಬು ಸಾಂಧ್ರತೆ ಹಾಗೂ ಥೈರಾಯ್ಡ್ ಪರೀಕ್ಷೆ ಏರ್ಪಡಿಸಲಾಗಿತ್ತು. ಅಽಕಾರಿ, ಸಿಬ್ಬಂದಿ ಸೇರಿ ಸುಮಾರು ೨೦೦ ಜನರಿಗೆ ತಜ್ಞರಿಂದ ಉಚಿತ ತಪಾಸಣೆ ಹಾಗೂ ಸಲಹೆ ನೀಡಲಾಯಿತು.
    ಐಎಂಎ ಅಧ್ಯಕ್ಷ ಡಾ. ಸತೀಶ ಇರಕಲ್, ಖಜಾಂಚಿ ಡಾ. ಸಪನ್, ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ, ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್. ನದಾಫ್, ಉಪ ಸಹಾಯಕ ಇಂಜಿನಿಯರ್ ಗುಲ್ಜಾರ್, ಇತರರಿದ್ದರು.
    ಐ.ಎಂ.ಎ ಮಹಿಳಾ ಘಟಕದ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಮಾತನಾಡಿ, ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
    ಶಿಬಿರದಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ. ಕಾರ್ತಿಕ ಹೆರಕಲ್ಲ, ಡಾ. ಸಿದ್ಧಗಂಗಾ, ಡಾ. ಭಾವನಾ ಮಲ್ಹೋತ್ರ, ಡಾ. ನೀಲಕಂಠ ಪಾಟೀಲ, ಡಾ. ಗೌರಿ ತಾವರಗೇರಿ, ಡಾ. ವಾಣಿ ಇರಕಲ್, ಡಾ. ಗೌರಿ ಪಾಟೀಲ ಬೆಲ್ಲದ, ಡಾ. ನಮ್ರತಾ ಹುರಕಡ್ಲಿ, ಡಾ. ನಿಶಾ ಗಲಗಲಿ, ಡಾ. ಜ್ಯೋತಿ ಹಿರೇಮಠ, ಡಾ. ವಿಜಯ ನಾಡಕರ್ಣಿ, ಡಾ. ಸಫನ್ ಅವರನ್ನು ಸನ್ಮಾನಿಸಲಾಯಿತು.
    ಎಸ್‌ಡಿಎಂ ಮೆಡಿಕಲ್ ಕಾಲೇಜ್ ವೈದ್ಯರು ಹಾಗೂ ಶ್ರೀಯಾ ನರ್ಸಿಂಗ್ ಕಾಲೇಜನ ಸಿಬ್ಬಂದಿ ಶಿಬಿರಕ್ಕೆ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts