More

    ಅಡವಿಸೋಮಾಪೂರ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ

    ಗದಗ: ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಲ್ಲಿ ಆರೋಗ್ಯ ಸಮೆಸ್ಯೆಗಳು ಉಲ್ಬಣಗೊಳುತ್ತಿವೆ. ರೋಗಗಳ ಬಗ್ಗೆ ಬಹುಬೇಕ ತಪಾಸಣೆ ಮಾಡಿಸಿಕೊಳ್ಳುವುರಿಂದ ರೋಗಗಳ ತೊಂದರೆಯಿಂದ ತಪ್ಪಿಸಿ ಗುಣಮುಖವಾಗಲು ಸಾಧ್ಯತೆ ಇದೆ ಎಂದು ಆರೋಗ್ಯ ನಿರೀಣಾಧಿ-ಕಾರಿ ಸಿದ್ದಪ್ಪ ಲಿಂಗದಾಳ ಹೇಳಿದರು.
    ಅಡವಿ ಸೋಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಮೇಳ ಮತ್ತು ಎನ್​.ಸಿ.ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಎನ್​.ಸಿ.ಡಿ ಕಾರ್ಯಕ್ರಮಗಳ ಮೂಲಕ ಮದುಮೇಹ, ಅಧಿಕರಕ್ತದೊತ್ತಡ ಕ್ಯಾನ್ಸರ್​ ಪಾರ್ಶ್ಚವಾಯು ಮುಂತಾದ ರೋಗವನ್ನು ಪರೀಸಿ, ರೋಗಗಳಿಗೆ ಔಷದೋಪಾಚಾರ ಮಾಡುವುದರಿಂದ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂತಹ ಕಾರ್ಯಕ್ರಮಗಳನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಸಮುದಾಯ ಆರೋಗ್ಯಾಧಿಕಾರಿ ಲೂದಿಯಾ ಮಾತನಾಡಿ, ತಂಬಾಕು, ಗುಟಕಾ, ಮದ್ಯಸೇವೆ ಆರೋಗ್ಯಕ್ಕೆ ಹಾನಿಕರ. ಅವುಗಳಿಂದ ದೂರವಿರಿ ಮತ್ತು ಪೌಷ್ಠಿಕ ಆಹಾರಗಳ ಸೇವನೆ ಯೋಗ ವ್ಯಾಯಾಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಂಡು ಆರೋಗ್ಯ ಸಂಪತ್ತನ್ನು ಪಡೆಯಬೇಕೆಂದು ಹೇಳಿದರು. 50 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಆರೋಗ್ಯ ಸುರಾಧಿಕಾರಿ ಸವಿತಾ ಪವಾರ ಮಾತನಾಡಿದರು. ಗ್ರಾಪಂ ಮಾಜಿ ಅಧೆ ರೇಣವ್ವ ಉಮ್ಮಣ್ಣವರ್​, ಸೋಮಪ್ಪ ಅಣ್ಣಿಗೇರಿ, ಮಾಲಾ ಮೇವುಂಡಿ, ರೇಣುಕಾ ಪುರದ, ಮಿನಾ ವಡ್ಡರ, ಮಂಜುಳಾ ಆರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts