More

    ಮಕ್ಕಳಿಗೆ ಯಾರಾದರೂ ಸೈಕಲ್ ಸವಾರಿ ಕಲಿಸುವೆ ಎಂದು ಕರೆದರೆ ಹುಷಾರು; ನಡೆಯಬಾರದ್ದು ನಡೆಯಿತು ಶಾಲೆಯ ಆವರಣದಲ್ಲೇ…

    ಮಂಗಳೂರು: ಸೈಕಲ್ ಚಲಾಯಿಸುವುದನ್ನು ಕಲಿಯಬೇಕು ಎಂಬ ಆಸೆ ಹಲವಾರು ಮಕ್ಕಳಲ್ಲಿರುವುದು ಸರ್ವೇ ಸಾಮಾನ್ಯ. ಹಾಗಂತ ಯಾರ್ಯಾರೋ ಸೈಕಲ್ ಚಲಾಯಿಸುವುದನ್ನು ಕಲಿಸುವುದಾಗಿ ಕರೆದರೆ ಮಕ್ಕಳನ್ನು ಕಳಿಸುವುದು ಅಥವಾ ಮಕ್ಕಳು ಅವರೊಂದಿಗೆ ಹೋಗುವುದು ಸುರಕ್ಷಿತವಲ್ಲ ಎಂಬ ಎಚ್ಚರಿಕೆ ನೀಡುವಂತಹ ಘಟನೆಯೊಂದು ಇಲ್ಲಿ ಜರುಗಿದೆ.

    ದಕ್ಷಿಣ ಕನ್ನಡದ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿಯೇ ಇಂಥದ್ದೊಂದು ಅಪರಾಧ ಎಸಗಿರುವ ಕುರಿತು ಪ್ರಕರಣ ದಾಖಲಾಗಿದೆ. ಜಿಲ್ಲೆಯ ಖಾಸಗಿ ಶಾಲೆಯೊಂದರ ಆಡಳಿತಾಧಿಕಾರಿ ಸೈಕಲ್ ಸವಾರಿ ಕಲಿಸುವುದಾಗಿ ಶಾಲೆಗೆ ಕರೆದುಕೊಂಡು ಹೋಗಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೇವಚಳ್ಳ ಗ್ರಾಮದ ನಿವಾಸಿ, ಶಾಲೆಯೊಂದರ ಉದ್ಯೋಗಿ ಅನಿಲ್ ಆರೋಪಿ. ಈತ ಡಿ.10ರಂದು ಬಾಲಕಿಯೊಬ್ಬಳನ್ನು ಸೈಕಲ್ ಸವಾರಿ ಕಲಿಸುವುದಾಗಿ ಹೇಳಿ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ದೈಹಿಕವಾಗಿ ಬಳಲಿದ್ದ ಬಾಲಕಿಯನ್ನು ಆಕೆಯ ಮನೆಯಲ್ಲಿ ತಾಯಿ ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಡಿ. 13 ರಂದು ಬಾಲಕಿಯ ತಾಯಿ ನೀಡಿದ ದೂರಿನಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಲo: 376 IPC ಮತ್ತು 5(F)(M),6,10 POCSO Act 2012 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts