More

    ಚುನಾವಣೆ ಹೊಸ್ತಿಲಲ್ಲಿ ಎಚ್‌ಡಿಕೆ ದೇವರ ಮೊರೆ;ತೋಟದ ಮನೆಯಲ್ಲಿ ಶತಚಂಡಿ ಯಾಗ, ಕೋಟಿ ಮೃತ್ಯುಂಜಯ ಜಪ

    ಬಿಡದಿ: ಚುನಾವಣೆ ಹೊಸ್ತಿಲಿನಲ್ಲಿ ವಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಶುಕ್ರವಾರ ನೂರಾರು ಋತ್ವಿಜರ ನೇತೃತ್ವದಲ್ಲಿ ಶತ ಚಂಡಿಕಾ ಯಾಗ, ಕೋಟಿ ಮೃತ್ಯುಂಜಯ ಜಪ ಮತ್ತಿತರ ಪೂಜಾ ಕಾರ್ಯಕ್ರಮಗಳು ಆರಂಭಗೊಂಡವು.

    ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಕೈಗೊಂಡಿರುವ ಪಂಚರತ್ನ ಯೋಜನೆ ಯಶಸ್ಸಿಗೆ ಹಾಗೂ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. 9 ದಿನ ನಿರಂತರವಾಗಿ ಹೋಮ ಹವನಗಳು ನಡೆಯಲಿವೆ. ಇಂದಿನ ಪೂಜೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಎಚ್.ಡಿ.ರೇವಣ್ಣ, ಪುತ್ರ ನಿಖಿಲ್ ಕುವಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

    ತೆಲಂಗಾಣದ ಋತ್ವಿಜರು: ಕೇತುಗಾನಹಳ್ಳಿಯಲ್ಲಿ ಕೈಗೊಂಡಿರುವ ಹೋಮ ಹವನಗಳು ನೆರೆಯ ತೆಲಂಗಾಣ ರಾಜ್ಯದ ನುರಿತ 300ಕ್ಕೂ ಹೆಚ್ಚು ಋತ್ವಿಜರ ನೇತೃತ್ವದಲ್ಲಿ ನಡೆಯುತ್ತಿದೆ. ಗುರುವಾರೇ ಋತ್ವಿಜರ ತಂಡ ಆಗಮಿಸಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್. ಚಂದ್ರಶೇಖರ್ ಹಾಗೂ ಕುವಾರಸ್ವಾಮಿ ನಡುವೆ ಉತ್ತಮ ಬಾಂಧವ್ಯ ಇರುವ ಕಾರಣ ಸ್ವತಃ ಚಂದ್ರಶೇಖರ್ ಅವರೇ ಋತ್ವಿಜರನ್ನು ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

    ಅಮಿತ್ ಷಾಗೆ ಯಾವ ನೈತಿಕತೆ ಇದೆ: ರಾಜ್ಯದಲ್ಲಿ ಒಂದು ಕಡೆ ಬಿಜೆಪಿಯ ಲಂಚಾವತಾರ ಹೆಚ್ಚಿದೆ. ಇನ್ನೊಂದು ಕಡೆ ಕೇಂದ್ರ ಗಹ ಮಂತ್ರಿ ಅಮಿತ್ ಷಾ ಅವರು ರಾಜ್ಯ ಪ್ರವಾಸ ವಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅರಿವಿದ್ದಿದ್ದರೆ ಅವರು ಇಲ್ಲಿಗೆ ಬರುವಂತೆಯೇ ಇಲ್ಲ. ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಎಚ್‌ಡಿಕೆ ಕುಟುಕಿದರು.

    ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ಹೇಗೆ ಲೂಟಿ ವಾಡುತ್ತಿದೆ ಎನ್ನುವುದನ್ನು ಜನರು ನೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಹೈಕವಾಂಡ್ ಸಂಸ್ಕೃತಿ ಇಟ್ಟುಕೊಂಡು ಬಂದಿವೆ. ಕಾಂಗ್ರೆಸ್‌ನವರು ಸಹ ರೀಡೂ ಹಗರಣದಲ್ಲಿ ಎಷ್ಟು ಲೂಟಿ ವಾಡಿದ್ದಾರೆ ಎಂಬ ಸತ್ಯ ಗುಟ್ಟಾಗಿ ಉಳಿದಿಲ್ಲ ಸತ್ಯಹರಿಶ್ಚಂದ್ರನಂತೆ ಮಾತನಾಡುವ ಸಿದ್ದರಾಮಯ್ಯ ಅವರ ಕಾಲದಲ್ಲಿ ಎಷ್ಟು ಹಗರಣ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಎಚ್‌ಡಿಕೆ ಗುಡುಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts