More

    ‘ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ’ – ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ

    ರಾಮನಗರ: ಜೆಡಿಎಸ್​ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೆ ಆರ್.ಎಸ್.ಎಸ್. ಬಗ್ಗೆ ವಾಗ್ದಾಳಿ ಮಾಡಿದ್ದಾರೆ. 40 ವರ್ಷದ ಹಿಂದಿನ ಆರ್.ಎಸ್.ಎಸ್. ಬೇರೆ, ಇವತ್ತಿನ ಆರ್.ಎಸ್.ಎಸ್. ಬೇರೆ ಎಂದಿರುವ ಅವರು, ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.

    ಇಂದು ರಾಮನಗರದಲ್ಲಿ ಮಾತನಾಡಿದ ಎಚ್​ಡಿಕೆ, ಎಲ್ಲ ಯೂನಿವರ್ಸಿಟಿಗಳ ಸಿಂಡಿಕೇಟುಗಳಲ್ಲಿ ಆರೆಸ್ಸೆಸ್ನ ಕಾರ್ಯಕರ್ತರನ್ನ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಯೂನಿವರ್ಸಿಟಿಯಲ್ಲಿ ಕೆಲಸ ಆಗ್ಬೇಕಂದ್ರೆ ಸಿಂಡಿಕೇಟ್ ಸದಸ್ಯರು ಲಕ್ಷ ಲಕ್ಷ ಹಣ ಕೇಳುತ್ತಾರೆ ಎಂದರು.

    ಇದನ್ನೂ ಓದಿ: ಕಾಂಗ್ರೆಸ್​ ವರ್ಕಿಂಗ್ ಕಮಿಟಿ ಸಭೆ: ಹೊಸ ಅಧ್ಯಕ್ಷರ ಆಯ್ಕೆಗೆ ನಿರ್ಣಯ?

    ವಿಜಯದಶಮಿಯ ದಿನದಂದು ಆರ್.ಎಸ್.ಎಸ್.ನ ಭಾಗವತ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು ಆರ್.ಎಸ್.ಎಸ್. ಸುಪರ್ದಿಗೆ ನೀಡಿ ಅಂತ. ಹಿಂದೂ ದೇವಾಲಯಗಳನ್ನ ಆರ್.ಎಸ್.ಎಸ್.ನವರು ಗುತ್ತಿಗೆ ಹಾಕಿಕೊಂಡಿದ್ದಾರಾ? ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿಯವರು ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು. ಅದರ ಲೆಕ್ಕ ಇಲ್ಲ. ಮತ್ತೆ ಇದೀಗ ರಾಮಮಂದಿರದ ಹೆಸರಿನಲ್ಲಿ ಹಣ ಸಂಗ್ರಹ ಆಯ್ತು. ಇದರ ಹಣ ಎಲ್ಲಿ ಇಟ್ಟಿದ್ದಾರೆ, ಯಾರು ಲೆಕ್ಕ ಕೊಡುತ್ತಾರೆ? ಎಂದು ಪ್ರಶ್ನಿಸಿದರು.

    ರಾಮನ ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ. ಹಣದ ಲೆಕ್ಕವನ್ನು ಕೇಳಿದರೆ ನೀವ್ಯಾರು ಅಂತ ಕೇಳುತ್ತಾರೆ. ರಾಮನ ಹೆಸರಿನಲ್ಲಿ ಹೇಗೆಲ್ಲಾ ಹಣ ದುರುಪಯೋಗ ಆಗಿದೆ ಅನ್ನೋದನ್ನ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

    ದುರ್ಗಾ ಪ್ರತಿಮೆಯ ವಿಸರ್ಜನೆಗೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು

    ರೈತರ ಧರಣಿ ಸ್ಥಳಕ್ಕೆ ಬೊಮ್ಮಾಯಿ ಭೇಟಿ; ಮೈಶುಗರ್​ ಕಾರ್ಖಾನೆ ವಿಷಯದಲ್ಲಿ ‘ಸಿಹಿ ಸುದ್ದಿ’ ಎಂದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts