More

    ‘ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರೋದು’ ಮಾಜಿ ಸಚಿವ ಎಚ್​.ಡಿ.ರೇವಣ್ಣ

    ಹಾಸನ: ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ್ದು, ಬಿಜೆಪಿ ಜತೆಗೆ ಜನತಾದಳ ಪಕ್ಷದವರೂ ಸಂತಸ ಪಡುವಂತಾಗಿದೆ. ರಾಜ್ಯದಲ್ಲಿ ನಮ್ಮ ಜನತಾದಳ ಪರಿವಾರದಿಂದ ಬಂದವರೇ ಹೆಚ್ಚಾಗಿ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಮಾಜಿ ಸಚಿವ ಎಚ್​.ಡಿ.ರೇವಣ್ಣ ಹೇಳಿದ್ದಾರೆ.

    ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಕೃಷಿ ಯಂತ್ರಧಾರೆ ಸಮಾರಂಭದಲ್ಲಿ ಪಾಲ್ಗೊಂಡ ರೇವಣ್ಣ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ಯುವ ಮುಖಂಡರೊಬ್ಬರು ಮುಖ್ಯಮಂತ್ರಿ ಆಗಿರೋದು ಖುಷಿ ತಂದಿದೆ. ಹಿಂದಿನ ಎರಡು ವರ್ಷಗಳ ಕಾಲ ರಾಜ್ಯದಲ್ಲಿ ಸುಲಿಗೆ ನಡೆಯುತ್ತಿತ್ತು. ಇದೀಗ ಇವರು ಬಂದಿದ್ದು, ಒಳ್ಳೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿ ಎಂದು ಅವರು ಹೇಳಿದ್ದಾರೆ.

    ಹಾಸನ ಜಿಲ್ಲೆಯ ಕೆಲಸ ತಡೆ ಹಿಡಿದಿದ್ದಾಗಿ ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದರು. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ರೈತ ಪರವಾಗಿ ಒಳ್ಳೆಯ ಕೆಲಸ ಮಾಡಲಿ. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ನಾನು ಸಂತೋಷ್ ಅವರ ಮನೆಗಾಗಲಿ, ಪ್ರಹ್ಲಾದ್ ಜೋಶಿ ಅವರ ಮನೆಗಾಗಲಿ ಹೋಗಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹಿಂದೆ ಗಡ್ಕರಿ ಅವರೇ ಬಂದು ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ರು. ಹೀಗಾಗಿ ಅದರ ಬಗ್ಗೆ ಮಾತಾಡಲು ದೆಹಲಿಗೆ ಹೋಗಿದ್ದೆ. ಬೇರೆ ಇನ್ನಾವುದೇ ರಾಜಕೀಯ ಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ ಎಂದು ರೇವಣ್ಣ ನುಡಿದಿದ್ದಾರೆ.

    ಉತ್ತರ ಕನ್ನಡ ಪ್ರವಾಹ: ನೆರೆ ಸಂತ್ರಸ್ತರ ನೆರವಿಗೆ ನಿಲ್ಲುವುದಾಗಿ ಭರವಸೆ ಕೊಟ್ಟ ಸಿಎಂ

    ಓಲಾ ಎಲೆಕ್ಟ್ರಿಕ್ ಸ್ಕೂಟರ್ ತಗೊಂಡ್ರೆ ಅದರ ಸರ್ವಿಸ್ ಮಾಡಿಸೋದೆಲ್ಲಿ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts