More

    ಚುನಾವಣೆ ನಂತರದ ಹಿಂಸಾಚಾರ : ತನಿಖೆ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಜಾ

    ಕೊಲ್ಕತಾ : ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನೀಡಿದ್ದ ಆದೇಶವನ್ನು ಪುನರ್​ಪರಿಶೀಲಿಸುವಂತೆ ಬಂಗಾಳದ ಟಿಎಂಸಿಯ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೊಲ್ಕತಾ ಹೈಕೋರ್ಟ್​ ವಜಾಗೊಳಿಸಿದೆ.

    ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು, ಜೂನ್ 18 ರಂದು ನೀಡಿದ್ದ ತೀರ್ಪಿನಲ್ಲಿ, ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದಲ್ಲಿ ನಡೆದಿದೆ ಎನ್ನಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ಪ್ರಕರಣಗಳನ್ನು ಪರೀಕ್ಷಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್​ಎಚ್​ಆರ್​ಸಿ)ಕ್ಕೆ ನಿರ್ದೇಶನ ನೀಡಿತ್ತು. ಹಲವಾರು ಜನರನ್ನು ತಮ್ಮ ಮನೆಗಳಿಂದ ತೆರವುಗೊಳಿಸಿದ, ಶಾರೀರಿಕ ಹಲ್ಲೆ ನಡೆಸಿದ, ಆಸ್ತಿಗೆ ಧಕ್ಕೆ ಮಾಡಿದ ಆರೋಪಗಳನ್ನು ಹಲವು ರಿಟ್​ ಅರ್ಜಿಗಳು ಕೋರ್ಟ್​ ಮುಂದೆ ತಂದಿದ್ದವು. ಈ ಬಗ್ಗೆ ತಂಡವೊಂದನ್ನು ರಚಿಸಿ ತನಿಖೆ ನಡೆಸಿ ಸಮಗ್ರ ವರದಿ ನೀಡಬೇಕೆಂದು ಎನ್​ಎಚ್​​ಆರ್​ಸಿ ಅಧ್ಯಕ್ಷರಿಗೆ ಹೈಕೋರ್ಟ್​ ಆದೇಶಿಸಿತ್ತು.

    ಸರ್ಕಾರದ ಹೇಳಿಕೆ ಪರಿಗಣಿಸದೆ ಈ ತೀರ್ಪು ನೀಡಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶವನ್ನು ರೀಕಾಲ್​ ಮಾಡಲು ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂಡಾಲ್​ ಅವರ ನೇತೃತ್ವದ ಪಂಚಸದಸ್ಯ ಪೀಠವು ಸರ್ಕಾರದ ಈ ಅರ್ಜಿಯನ್ನು ಇಂದು ವಜಾಗೊಳಿಸಿತು. (ಏಜೆನ್ಸೀಸ್)

    ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 193.65 ಕೋಟಿ ರೂ. ಅನುಮೋದನೆ

    ಕರೊನಾ ನಿಯಮ ಗಾಳಿಗೆ ತೂರಿ ಪಕ್ಷದ ಕಛೇರಿ ಉದ್ಘಾಟನೆ: ಮಾಜಿ ಮೇಯರ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts