More

    ಯಾಲಕ್ಕಿ ಓಣಿಯಲ್ಲಿ ಅಂಬಾದೇವಿ ನವರಾತ್ರಿ ವೈಭವ; ನಿತ್ಯವೂ ವಿಶೇಷ ಪೂಜೆ, ದಾಂಡಿಯಾ ನೃತ್ಯ

    ಹಾವೇರಿ: ಶ್ರೀ ಶಿವಶಕ್ತಿ ನವರಾತ್ರಿ ಗರ್ಭಾ ಮಂಡಳ ಹಾಗೂ ಶಿವಶಕ್ತಿ ಯುವಕ ಮಂಡಳದ ವತಿಯಿಂದ ನಗರದ ಯಾಲಕ್ಕಿ ಓಣಿಯಲ್ಲಿ ನವರಾತ್ರಿ ಅಂಗವಾಗಿ ಶ್ರೀ ಅಂಬಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ನವರಾತ್ರಿ ವೈಭವ ಕಳೆಗಟ್ಟಿದೆ.
    ಶ್ರೀ ಅಂಬಾದೇವಿಯ ಅದ್ಧೂರಿ ಮೆರವಣಿಗೆ ಮೂಲಕ ಭಾನುವಾರ ದೇವಿ ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಕೆಂಪು ಸೀರೆ ಉಟ್ಟಿದ್ದ ಮಹಿಳೆಯರು ದೇವಿಗೆ ಕೆಂಪು ಸೀರೆ ಉಡಿಸಿ ವಿಶೇಷ ಪೂಜೆ, ಆರತಿ ಮಾಡಿದರು. ಈ ಸಂದರ್ಭದಲ್ಲಿ ಸಿಂದಗಿ ಮಠದ 51 ವಟುಗಳು ಪಾಲ್ಗೊಂಡಿದ್ದರು. ಯುವಕ- ಯುವತಿಯರು, ಮಕ್ಕಳು, ಹಿರಿಯರು ದಾಂಡಿಯಾ, ಬಾಂಗಡಾ ನೃತ್ಯ ಮಾಡುವ ಮೂಲಕ ಹಬ್ಬಕ್ಕೆ ವಿಶೇಷ ಮೆರುಗು ತಂದುಕೊಟ್ಟರು.
    ಅ.15ರಿಂದ ಅ.24ರವರೆಗೆ ವಿಶೇಷ ಕಾರ್ಯಕ್ರಮ ಜರುಗಲಿವೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವಿ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಲಿದೆ. ಪ್ರತಿದಿನ ರಾತ್ರಿ 8 ಗಂಟೆಯಿಂದ ರಾಜಸ್ತಾನಿ ಹಾಗೂ ಗುಜರಾತಿ ದಾಂಡಿಯಾ ರಾಸ್ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅ.22ರಂದು ಬೆಳಗ್ಗೆ 9.30ಕ್ಕೆ ಚಂಡಿ ಹೋಮ, ಅ.28ರಂದು ರಾತ್ರಿ 8.30ಕ್ಕೆ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ರಾಜಸ್ತಾನಿ ದಾಂಡಿಯಾ ಕಾರ್ಯಕ್ರಮ ಜರುಗಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಕಿಶೋರಕುಮಾರ ಖಂಡೇಲವಾಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts