More

    ಗುರು- ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳು; ಶಿಕ್ಷಕರ, ಮಕ್ಕಳ ದಿನಾಚರಣೆಯಲ್ಲಿ ಶಿಕ್ಷಕಿ ಡಾ.ಗೀತಾ ಸುತ್ತಕೋಟಿ ಹೇಳಿಕೆ

    ಹಾವೇರಿ: ತಾಯಿ ಜೀವ ನೀಡಿದರೆ ಗುರು ಜೀವನವನ್ನು ರೂಪಿಸುತ್ತಾನೆ. ಗುರು ಕೇವಲ ಒಬ್ಬ ವ್ಯಕ್ತಿಯಲ್ಲ. ಗುರು ಒಬ್ಬ ಮಹಾನ್ ಶಕ್ತಿ. ಅದೇ ರೀತಿ ಗುರು- ಶಿಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರಿಬ್ಬರಿಂದಲೂ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಕಿ ಡಾ.ಗೀತಾ ಸುತ್ತಕೋಟಿ ಅಭಿಪ್ರಾಯಪಟ್ಟರು.
    ಇಲ್ಲಿನ ಮಂಜುನಾಥ ನಗರದ ವೈಷ್ಣವಿ ಮಹಿಳಾ ಮಂಡಲದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರ ಹಾಗೂ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
    ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರು ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಾರೆ. ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಲಾಲ್ ಬಹಾದೂರ್ ಶಾಸ್ತ್ರೀ ಸೇರಿದಂತೆ ಅನೇಕ ಸಾಧಕರು ಬಡತನದಲ್ಲಿ ಹುಟ್ಟಿದರು. ಆದರೆ, ಕೈಕಟ್ಟಿ ಕೂರದೇ ಸಾಧನೆ ಮಾಡುವ ಛಲ ತೊಟ್ಟರು. ಗುರುಗಳ ಮಾರ್ಗದರ್ಶನ ಪಡೆದು ಮಹಾನ್ ವ್ಯಕ್ತಿಗಳಾದರು. ನಮ್ಮಲ್ಲಿ ಅರ್ಹತೆ ಇದ್ದರೆ ನಮ್ಮ ಬೆಳವಣಿಗೆಯನ್ನು ತಡೆಯುವ ಶಕ್ತಿ ಜಗತ್ತಲ್ಲಿ ಯಾರಿಗೂ ಇರುವುದಿಲ್ಲ ಎಂದರು.
    ಜೀವನದಲ್ಲಿ ಗುರಿಯನ್ನು ಹೊಂದಿ ಸಾಧಿಸುವ ಛಲ ಮನದಲ್ಲಿ ಸದಾ ಇರಬೇಕು. ಆ ಗುರಿಯನ್ನು ತಲುಪುವವರೆಗೂ ಶ್ರದ್ಧೆ ಪ್ರಯತ್ನ ನಮ್ಮದಾಗಿರಬೇಕು. ಇದರ ಜತೆಗೆ ನಮ್ಮ ಜೀವನದಲ್ಲಿ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಅಂದಾಗ ಯಶಸ್ಸು ಸಿಗುತ್ತದೆ. ನಮ್ಮ ಭವಿಷ್ಯ ಕೈಯಲ್ಲಿರುವ ರೇಖೆಯಲ್ಲಿ ಇರುವುದಿಲ್ಲ. ನಾವು ನಿರ್ಧರಿಸುವ ಗುರಿಯಲ್ಲಿ ಇರುತ್ತದೆ ಎಂದರು.
    ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪಾಟೀಲ ಮಾತನಾಡಿ, ಮಕ್ಕಳು ಯಾವಾಗಲೂ ಗುರುಗಳಿಗೆ ವಿಧೇಯಕರಾಗಿದ್ದರೆ ತಮ್ಮ ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಬಹುದು ಎಂದರು.
    ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು.
    ಚೈತ್ರಾ ಹೊಸಮಠ, ಹರಿಣಾಕ್ಷಿ ಕೊರಡರೆ, ರೇಣುಕಾ ಅಲದಕಟ್ಟಿ, ಚಿನ್ನಮ್ಮ ಬನ್ನಿಕೊಪ್ಪ, ತಾರಾ ಕುಕುನೂರು, ಸ್ವಾತಿ ಮಂಗಳೂರು, ಲಲಿತಾ ಪಾಟೀಲ, ಪ್ರೇಮಾ ಶಕುಂತಲಾ, ಕವಿತಾ ಮುದುಕಣ್ಣನವರ, ಜ್ಞಾನೇಶ್ವರಿ ಚೂರಿ, ಮತ್ತಿತರರು ಪಾಲ್ಗೊಂಡಿದ್ದರು. ಚಾರ್ವಿ ಹಾವನೂರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ರೂಪಾ ಹಾವನೂರು ವಂದಿಸಿದರು. ಪ್ರಭಾವ ಹುಚ್ಚನಗೌಡ್ರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts