More

    ಬಡ್ಡಿ ಸಮೇತ ನೆಕ್ಲೆಸ್ ಹಣ ನೀಡಲು ಜುವೆಲ್ಲರಿ ಮಾಲೀಕರಿಗೆ ಸೂಚನೆ

    ಹಾವೇರಿ: ಗ್ರಾಹಕರು ಬಂಗಾರದ ಆಭರಣ ಮಾಡಲು ನೀಡಿದ್ದ 60 ಸಾವಿರ ರೂ.ಯನ್ನು ಬಡ್ಡಿ ಸಮೇತ ಪಾವತಿಸುವಂತೆ ರಾಣೆಬೆನ್ನೂರಿನ ಜುವೆಲ್ಲರಿ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
    ಹಿರೇಕೆರೂರು ತಾಲೂಕು ವಡೇರಹಳ್ಳಿ ಗ್ರಾಮದ ಜಯಮ್ಮ ಶಿವಾನಂದ ಪಾಟೀಲ ಅವರು ಮಾರ್ಚ್ 14, 2020ರಂದು ರಾಣೆಬೆನ್ನೂರಿನ ಬೆಳ್ಳೂಡಿ ಜುವೆಲ್ಲರಿಯಲ್ಲಿ 25 ಗ್ರಾಂ ತೂಕದ ನೆಕ್ಲೆಸ್ ಮಾಡಿಸಲು ತೆರಳಿದ್ದರು. ಮುಂಗಡವಾಗಿ 50 ಸಾವಿರ ರೂ. ಹಾಗೂ ಹಳೆ ಬಂಗಾರದ ಮೊತ್ತ 10 ಸಾವಿರ ರೂ. ಸೇರಿ 60 ಸಾವಿರ ರೂ. ಪಾವತಿಸಿದ್ದರು. ಒಂದು ತಿಂಗಳೊಳಗಾಗಿ ನೆಕ್ಲೆಸ್ ಮಾಡಿಕೊಡಲಾಗುವುದು. ನಂತರ 64,500 ರೂ. ಪಾವತಿಸುವಂತೆ ಜುವೆಲ್ಲರಿ ಮಾಲೀಕರು ತಿಳಿಸಿದ್ದರು. ನಂತರ ಫೋನ್ ಕರೆ ಮಾಡಿ ನೆಕ್ಲೆಸ್‌ನ ಬಗ್ಗೆ ವಿಚಾರಿಸಿದಾಗ ಕೋವಿಡ್-19 ಕಾರಣ ನೀಡಿದ್ದಾರೆ. ನಂತರ ಸಾಕಷ್ಟು ಬಾರಿ ವಿಚಾರಿಸಿದರೂ ಎರಡು ವರ್ಷ ಸತಾಯಿಸುತ್ತ ಬಂದ ಕಾರಣ ಜಯಮ್ಮ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ ನಡೆಸಿತು. ಗ್ರಾಹಕರು ಪಾವತಿಸಿದ 60 ಸಾವಿರ ರೂ. ಮೊತ್ತವನ್ನು ಶೇ.6ರಷ್ಟು ಬಡ್ಡಿಯೊಂದಿಗೆ ಪಾವತಿಸಲು ಹಾಗೂ ಸೇವಾ ನ್ಯೂನ್ಯತೆಗೆ ಮೂರು ಸಾವಿರ ರೂ. ಮತ್ತು ಪ್ರಕರಣದ ಖರ್ಚು ಎರಡು ಸಾವಿರ ರೂ.ಯನ್ನು 30 ದಿನದೊಳಗಾಗಿ ಪಾವತಿಸಬೇಕು ಎಂದು ಆಯೋಗ ತೀರ್ಪು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts