More

    ಲೋಕಸಭಾ ಚುನಾವಣೆಗೆ ನೋಡಲ್ ಅಧಿಕಾರಿಗಳ ನೇಮಕ; ವಿವಿಧ ವಿಭಾಗಗಳಿಗೆ ಅಧಿಕಾರಿಗಳನ್ನು ನೇಮಿಸಿ ಡಿಸಿ ಆದೇಶ

    ಹಾವೇರಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಗಮ ಹಾಗೂ ವ್ಯವಸ್ಥಿತ ಚುನಾವಣಾ ಕಾರ್ಯ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.
    ಮಾನವ ಸಂಪನ್ಮೂಲ ನಿರ್ವಹಣೆಗೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಹುಗ್ಗಿ ಹಾಗೂ ಎನ್‌ಐಸಿ ಅಧಿಕಾರಿ ಬಿ.ಬಿ.ಹೆಗಡೆ ಅವರನ್ನು ನೇಮಕ ಮಾಡಲಾಗಿದೆ. ತರಬೇತಿ ನಿರ್ವಹಣೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಉಮೇಶಪ್ಪ ಹಾಗೂ ಡಯಟ್ ಪ್ರಾಂಶುಪಾಲ ಗಿರೀಶ ಪದಕಿ ಅವರನ್ನು ನೇಮಿಸಲಾಗಿದೆ.
    ವಸ್ತುಗಳ ನಿರ್ವಹಣೆಗೆ ಜಿಲ್ಲಾ ಅಂಕಿಸಂಖ್ಯಾ ಅಧಿಕಾರಿ ಆರ್.ಎಂ.ಭುಜಂಗ ಹಾಗೂ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಸತ್ಯಪ್ಪ ಸಂತಿ, ಸಾರಿಗೆ ನಿರ್ವಹಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೆಬೀಹಾಳ, ಕಂಪ್ಯೂಟರೀಕರಣ ಸೈಬರ್ ಸೆಕ್ಯೂರಿಟಿ ಮತ್ತು ಐಟಿ ನಿರ್ವಹಣೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಹಾಗೂ ಎನ್‌ಐಸಿ ಅಧಿಕಾರಿ ಬಿ.ಬಿ.ಹೆಗಡೆ ಅವರನ್ನು ನೇಮಿಸಲಾಗಿದೆ.
    ಸ್ವೀಪ್ ಚಟುವಟಿಕೆ ಹಾಗೂ ಮಾದರಿ ನೀತಿ ಸಂಹಿತೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಕಾನೂನು ಸುವ್ಯಸ್ಥೆ ಹಾಗೂ ವಿಎಂ ಮತ್ತು ಭದ್ರತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಇವಿಎಂ ನಿರ್ವಹಣೆಗೆ ಕೃಷಿ ಇಲಾಖೆ ಉಪನಿರ್ದೇಶಕ ಹುಲಿರಾಜ, ವೆಚ್ಚ ನಿರ್ವಹಣೆಗೆ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಎ.ವಸಂತಕುಮಾರ, ಬ್ಯಾಲೆಟ್ ಪೇಪರ್, ಪೋಸ್ಟಲ್ ಬ್ಯಾಲೆಟ್ ಮತ್ತು ಟಿಪಿಬಿಎಸ್‌ಗೆ ಜಿ.ಪಂ. ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಮಾಧ್ಯಮಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ಆರ್.ರಂಗನಾಥ ಅವರನ್ನು ನೇಮಿಸಲಾಗಿದೆ.
    ಸಂವಹನ ಯೋಜನೆಗೆ ಸಮೀಕ್ಷೆ ಮತ್ತು ವಸಾಹತು ಇಲಾಖೆಯ ಉಪ ನಿರ್ದೇಶಕ ರೂಪಕುಮಾರ, ಎಲೆಕ್ಟ್ರೋರಲ್ ರೂಲ್ಸ್‌ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿ ನಿರ್ವಹಣೆಗೆ ಜಿಲ್ಲಾ ನೋಂದಣಾಧಿಕಾರಿ ಮಹೇಶ ಪಂಡಿತ, ವೀಕ್ಷಕರ ನಿರ್ವಹಣೆಗೆ ಕೈಗಾರಿಕಾ ಇಲಾಖೆ ಉಪನಿರ್ದೇಶಕ ವಿನಾಯಕ ಜೋಶಿ ಅವರನ್ನು ನೇಮಿಸಲಾಗಿದೆ.
    ವರದಿಗೆ ಕೃಷಿ ಅಧಿಕಾರಿ ಬಸವರಾಜ ಕೊಪ್ಪದ ಹಾಗೂ ಸಹಾಯಕ ಸಂಖ್ಯಾಧಿಕಾರಿ ಶಂಕರ ಪವಾರ ಹಾಗೂ ದೂರು ಮಾನಿಟರಿಂಗ್ ಸೆಲ್-1950ಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಮದ ಜಿಲ್ಲಾ ವ್ಯವಸ್ಥಾಪಕ ತೇಜರಾಜ ಹಸಲಬಾಳ ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts