More

    ಹಾಲು ಪ್ಯಾಕಿಂಗ್ ಘಟಕ ಉದ್ಘಾಟನೆ; ಹಾಲು ಉತ್ಪಾದನೆಯಲ್ಲಿ ಕರ್ನಾಟಕವೂ ಮುಂದು ಎಂದ ಸಿಎಂ

    ಹಾವೇರಿ: ಹಾಲು ಕೊಡುವ ಆಕಳಿಗೆ ಕಾಮಧೇನು ಎಂದು ಕರೆಯುತ್ತೇವೆ. ಒಂದು ಆಕಳು ಇಟ್ಟಕೊಂಡರೆ ಒಂದು‌ ಕುಟುಂಬ ನಡೆಯುತ್ತದೆ ಎಂಬ ಮಾತಿದೆ. ಹಾಲು ಉತ್ಪಾದನೆಯಲ್ಲಿ ಗುಜರಾತ್ ನಂತರದಲ್ಲಿ ಕರ್ನಾಟಕ ಸಾಧನೆಗೈದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್)ದ ವತಿಯಿಂದ ೧೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಯುಎಚ್ ಟಿ ಹಾಲು ಪ್ಯಾಕಿಂಗ್ ಮತ್ತು ಹಾಲು ಸ್ಯಾಚೆಟ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.  

    ಡಾ.ಕುರಿಯನ್ ಕ್ಷೀರ ಕ್ರಾಂತಿಯ ಪಿತಾಮಹ ದೇಶದಲ್ಲಿ ಹಾಲು ಉತ್ಪಾದನೆ, ಮಾರುಕಟ್ಟೆ ವಿಸ್ತರಣೆಗೆ ಗಟ್ಟಿ ನೆಲೆ ಕಟ್ಟಿಕೊಟ್ಟರು.

    ಕಾರ್ಪೋರೆಟ್ ಕಂಪನಿಯಿಂದ ಮಾಡಬಹುದಾಗಿತ್ತು. ಆದರೆ, ಕೋ ಆಪರೇಟಿವ್ ಸಂಸ್ಥೆಗಳನ್ನು ಹಾಲು ಉತ್ಪಾದಕರಿಗೆ ಕೊಡುವ ವ್ಯವಸ್ಥೆ ಮಾಡಿದರು. ಇದರಿಂದ ಗ್ರಾಮೀಣ ಬದುಕಲ್ಲಿ ಬಹಳ‌ದೊಡ್ಡ ಬದಲಾವಣೆ ಆಗಿದೆ. ಮೊದಲು ಮನೆಯ ಮಕ್ಕಳಿಗೆ ಹಾಲು, ಮೊಸರಿಗಾಗಿ ಹೈನು ಮಾಡಲಾಗುತ್ತಿತ್ತು. ಈಗ ದೊಡ್ಡ ಮಟ್ಟದಲ್ಲಿ ಮಾಡಿ ಆರ್ಥಿಕವಾಗಿ ಆರ್ಥಿಕವಾಗಿ ಸುಧಾರಣೆಯಾಗುತ್ತಿದ್ದಾರೆ ಎಂದರು.

    ಗುಜರಾತ್ ನಂತರ ಕರ್ನಾಟಕದ ನಂದಿನಿ ಇವತ್ತು ಹಾಲು ಉತ್ಪಾದಕರ ಕಾಮಧೇನು ಆಗಿದೆ. ಒಂದು ಕಾಲದಲ್ಲಿ ಉಕ ಒಕ್ಕೂಟಗಳು ಕ್ಷೀಣ ಪರಿಸ್ಥಿತಿಯಲ್ಲಿ ಇದ್ದವು. ನಮ್ಮನ್ನು ಪ್ರತಿನಿಧಿಸುವವರು ಅಂದು ದಕ್ಷಿಣ ಕರ್ನಾಟಕ ಒಕ್ಕೂಟಕ್ಕೆ ಎಲ್ಲವೂ ಗ್ರಾಂಟ್ ನಲ್ಲಿ ಸ್ಥಾಪನೆ ಮಾಡಿದರು. 

    ಉತ್ತರ ಕರ್ನಾಟಕದ ಎಂಟು ಒಕ್ಕೂಟದಲ್ಲಿ ಸಾಲದಲ್ಲಿ ಕೆಲಸ ಮಾಡಲಾಯಿತು. ನಾನು ನೀರಾವರಿ ಸಚಿವನಾಗಿದ್ದೆ.‌ ಬಿಎಸ್ ವೈ ಅವರ ಗಮನಕ್ಕೆ ತಂದು ಗುಜರಾತ್ ನ ಎನ್ ಡಿಡಿಬಿ ಜತೆ ಮಾತನಾಡಿ ೨೭ ಕೋಟಿ ರೂ. ತುಂಬಿ ೧೦೦ ಕೋಟಿ ರೂ ವರೆಗೆ ಸಾಲ ಮನ್ನಾ ಮಾಡಿಸಿದೆವು. ಅಂದಿನಿಂದ ಉಕ ಒಕ್ಕೂಟ ಚೇತರಿಕೆ ಕಂಡವು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts