More

    ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ; ಮಣ್ಣೂರ ಗ್ರಾಮದ ಗದಿಗೇಶ್ವರ ತಪೋವನ ಕಾರ್ತಿಕೋತ್ಸವದಲ್ಲಿ ಶ್ರೀ ಗುರುಶಾಂತೇಶ್ವರ ಸ್ವಾಮೀಜಿ ಹೇಳಿಕೆ

    ಹಾವೇರಿ: ರಾಜಕೀಯ ಹಾಗೂ ಜಾತಿಯನ್ನು ಗ್ರಾಮದಿಂದ ಹೊರಗಿಟ್ಟು, ಪ್ರತಿಯೊಬ್ಬರೂ ಸೇವಾ ಮನೋಭವದಿಂದ ಒಗ್ಗಟ್ಟಿನಿಂದ ಶ್ರಮಿಸಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ನೆಗಳೂರು ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.
    ತಾಲೂಕಿನ ಮಣ್ಣೂರ ಗ್ರಾಮದ ವರದಾ ನದಿ ತೀರದ ಗದಿಗೇಶ್ವರ ತಪೋವನ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಪಂಚ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಗ್ರಾಮದ ಗದಿಗೇಶ್ವರ ಮಠದ ಆವರಣ ಇಷ್ಟು ಸುಂದರವಾಗಿ ಕಾಣಲು ಗ್ರಾಮಸ್ಥರ ದೃಢ ಸಂಕಲ್ಪವೇ ಕಾರಣ. ಗ್ರಾಮದಲ್ಲಿನ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಂಡು ದೂರ ಆಗುವ ಬದಲು ಒಗ್ಗಟ್ಟಿನಿಂದ ಇರಬೇಕು. ಊರಿಗೊಂದು ಮಠವಿರಬೇಕು, ಮಠಕ್ಕೆ ಒಬ್ಬ ಗುರುವಿರಬೇಕು ಆ ಗುರುವಿಗೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣವಿರಬೇಕು ಎಂದರು.
    ಸಾಮಾಜಿಕ ಕಾರ್ಯಕರ್ತೆ ಮಂಗಳಾ ನೀಲಗುಂದ ಮಾತನಾಡಿ, ಗ್ರಾಮದಲ್ಲಿ ಔಷಧೀಯ ಸಸ್ಯಗಳ ವನ ಮಾಡುವ ಕುರಿತು ಚಿಂತಿಸೋಣ. ಇದರಿಂದ ಆರೋಗ್ಯಕರ ಜೀವನ ನಮ್ಮದಾಗಲಿದೆ ಎಂದರು.
    ಎಸ್.ಬಿ.ಹಿರೇಮಠ ಮಾತನಾಡಿ, ಗುರುವಿನ ದೀಕ್ಷೆ ಸರಿಯಾಗಿ ಶಿಷ್ಯರಿಗೆ ಆಗಬೇಕು. ಆಗ ಮಾತ್ರ ಬದುಕು ಸಮೃದ್ಧ, ಸಾಕಾರವಾಗುವುದು. ನಾವೆಲ್ಲರೂ ಗುರುಗಳ ಮಾರ್ಗದರ್ಶನದಲ್ಲಿ ಜೀವನ ನಡೆಸೋಣ ಎಂದರು.
    ಪ್ರಗತಿಪರ ರೈತ ಸಿದ್ದಲಿಂಗಪ್ಪ ಗೌರಿಮನಿ, ಗ್ರಾಪಂ ಸದಸ್ಯ ಹೊಳಲಪ್ಪ ಪೂಜಾರ, ನಿವೃತ್ತ ಉಪತಹಶಿಲ್ದಾರ ವೀರಯ್ಯ ಹಿರೇಮಠ ಸೇರಿದಂತೆ ಇತರರು ಇದ್ದರು.
    ಶಿಕ್ಷಕರಾದ ಶಿವಾನಂದ ಮಡ್ಲೂರ ಕಾರ್ಯಕ್ರಮ ನಿರ್ವಹಿಸಿದರು. ಬಸವರಾಜ ಮಡ್ಲೂರ ಅತಿಥಿಗಳನ್ನು ಸ್ವಾಗತಿಸಿದರು.
    1008 ಪತ್ರಿ ಗಿಡ ನೆಡುವ ಪಣ
    ಗದಿಗೇಶ್ವರ ಮಠದ ಆವರಣದಲ್ಲಿ 1008 ಪತ್ರಿ ಗಿಡಗಳನ್ನು ನೆಡುವ ಮೂಲಕ ತಪೋವನವಾಗಿ ಅಭಿವೃದ್ಧಿ ಪಡಿಸಿ ಮನಸ್ಸಿಗೆ ನೆಮ್ಮದಿ, ಸಮಾಧಾನ ಸಿಗುವ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಗುರುಶಾಂತೇಶ್ವರ ಶಿವಾಚಾರ್ಯರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts