More

    ಕಾರ್ಮಿಕರ ಕಾರ್ಡು ಪರಿಶೀಲಿಸಲು ಮನವಿ

    ಹಾವೇರಿ: ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅನರ್ಹ ಕಾರ್ಡುಗಳನ್ನು ಕಾರ್ಮಿಕ ಇಲಾಖೆಯಿಂದ ಕೈಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಡುದಾರರು ತುರ್ತಾಗಿ ಒಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಮನವಿ ಮಾಡಿದೆ.
    ಜಿಲ್ಲೆಯಲ್ಲಿ ಒಟ್ಟು 2,90,4,838 ಕಾರ್ಡುಗಳಿದ್ದವು. ಇಲಾಖೆಯಿಂದ ಪರಿಶೀಲನೆ ಮಾಡಿದ ಬಳಿಕ 50,115 ಮಾತ್ರ ಅರ್ಹ ಕಾರ್ಡುಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಕೆಲ ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಹಾಗಾಗಿ, ಅರ್ಹ ಕಾರ್ಮಿಕರು ತಮ್ಮ ತಾಲೂಕಿನ ಕಾರ್ಮಿಕ ಕಚೇರಿಗೆ ಭೇಟಿ ನೀಡಿ ಕಾರ್ಮಿಕ ನಿರೀಕ್ಷಕರಲ್ಲಿ ತಮ್ಮ ಕಾರ್ಡು ಪರಿಶೀಲಿಸಿಕೊಳ್ಳಬೇಕು. ತಾವು ಅರ್ಹರಿದ್ದಲ್ಲಿ ಅಗತ್ಯ ದಾಖಲೆ ಕೊಟ್ಟುಸರಿಪಡಿಸಿಕೊಳ್ಳಬೇಕು ಎಂದು ದಿ ಗ್ರೇಟ್ ಇಂಡಿಯಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಎಂ.ಪಟವೇಗಾರ ಹಾಗೂ ರಸ್ತೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಎಂ.ಎಂ.ಕಾಲೇಭಾಗ ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts