More

    ಅರ್ಹ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಆಗದಿರಲಿ

    ಹಾವೇರಿ: ಕಾರ್ಮಿಕ ಇಲಾಖೆ ಜಿಲ್ಲೆಯಲ್ಲಿ 2.23 ಲಕ್ಷ ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ಪತ್ತೆಹಚ್ಚಿದ್ದು, ಈ ಕಾರ್ಡ್‌ಗಳ ನೋಂದಣಿ ರದ್ದತಿಗೆ ಇಲಾಖೆ ಮುಂದಾಗಿದೆ. ಕೆಲ ಅರ್ಹ ಕಾರ್ಮಿಕರ ಕಾರ್ಡ್‌ಗಳೂ ಇದರಲ್ಲಿದ್ದು, ಅರ್ಹರಿಗೆ ಅನ್ಯಾಯ ಆಗದಂತೆ ಎಚ್ಚರವಹಿಸುವಂತೆ ಸಂತ ಶಿಶುನಾಳ ಶರೀಫ ರಸ್ತೆ ಕಾಮಗಾರಿ ನಿರ್ಮಾಣ ಕಾರ್ಮಿಕರು ಮತ್ತು ಕಟ್ಟಡ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಂ.ಕಾಲೇಭಾಗ ಒತ್ತಾಯಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಕಾರ್ಡ್‌ಗಳ ಪತ್ತೆ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಕಲಿ ಕಾರ್ಡ್‌ಗಳನ್ನು ಪತ್ತೆ ಮಾಡಲು ಜಿಲ್ಲೆಗೆ ಬಂದಿದ್ದ 75 ಅಧಿಕಾರಿಗಳ ತಂಡ ಮನೆಮನೆಗೆ ಭೇಟಿ ನೀಡದೇ ದೂರವಾಣಿ ಮೂಲಕ ಮಾಹಿತಿ ಕಲೆ ಹಾಕಿರುವುದು ಸರಿಯಲ್ಲ. ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಕೊಟ್ಟಿರುವ ಒಂದು ವಾರ ಕಾಲಾವಕಾಶ ಸಾಕಾಗುವುದಿಲ್ಲ. ಕೆಲವು ಕಾರ್ಮಿಕರು ಅನಕ್ಷರಸ್ಥರಾಗಿದ್ದಾರೆ. ಇನ್ನು ಕೆಲವರು ದುಡಿಮೆಗೆ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗಿರುತ್ತಾರೆ. ಹೀಗಾಗಿ, ಕನಿಷ್ಠ ಒಂದು ತಿಂಗಳು ಕಾಲಾವಕಾಶ ಕೊಡಬೇಕು ಎಂದು ಮನವಿ ಮಾಡಿದರು.
    ಜಿಲ್ಲೆಯಲ್ಲಿ ಲಕ್ಷಾಂತರ ನಕಲಿ ಕಾರ್ಡ್‌ಗಳು ಸೃಷ್ಟಿಯಾಗಲು ಇಲಾಖೆ ಸಿಬ್ಬಂದಿ ಕೂಡ ಕಾರಣರಾಗಿದ್ದಾರೆ. ಹೀಗಾಗಿ, ಕಾರ್ಮಿಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ತಪ್ಪಿತಸ್ಥ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಕೆ.ಎಲ್.ಮಕಾನ್‌ದಾರ, ಎ.ಎಂ.ಪಟವೇಗಾರ, ರೇಖಾ ಕೆ. ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts