More

    ಸಹಕಾರಿ ಸಂಘಗಳು ಸದಸ್ಯರಲ್ಲಿ ಆತ್ಮವಿಶ್ವಾಸ ತುಂಬಬೇಕು; ಹೆಸ್ಕಾಂ ಅಧೀಕ್ಷಕ ಇಂಜಿನಿಯರ್ ನಾಗಪ್ಪ ಕೆ.

    ಹಾವೇರಿ: ಸಹಕಾರಿ ಸಂಘಗಳು ಸದಸ್ಯರಿಗೆ ಜೀವವಿಮೆ, ಸಾಮಾಜಿಕ ಸೇವೆ ಹಾಗೂ ಸದಸ್ಯರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೆಸ್ಕಾಂ ಹಾವೇರಿ ವೃತ್ತದ ಅಧೀಕ್ಷಕ ಇಂಜಿನಿಯರ್ ನಾಗಪ್ಪ ಕೆ. ಹೇಳಿದರು.
    ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ನೌಕರರ ಸಹಕಾರ ಸಂಘದ 45ನೇ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಪಾರದರ್ಶಕ ಆಡಳಿತ ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವ ಉದ್ದೇಶವಿದ್ದಾಗ ಸಹಕಾರಿ ತತ್ವದ ಮೂಲ ಸಂದೇಶ ಸಾರ್ಥಕವಾಗುತ್ತದೆ ಎಂದರು.
    ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ ಮುದಕಣ್ಣನವರ ಮಾತನಾಡಿ, ಸಹಕಾರಿ ಸಂಘದಲ್ಲಿ ಲಾಭ ಮುಖ್ಯವಲ್ಲ. ಸದಸ್ಯರ ಅಭಿವೃದ್ಧಿ ಮುಖ್ಯ. ಸಾಲಗಾರರಿಗೆ ಸಾಕ್ಷಿ ಹಾಕುವಾಗ ಪ್ರತಿ ಸದಸ್ಯ ಎಚ್ಚರಿಕೆಯಿಂದ ಅವರ ಪೂರ್ವಾಪರ ತಿಳಿದುಕೊಂಡು ಸಹಿ ಮಾಡಬೇಕು. ಹಾವೇರಿ ಹೆಸ್ಕಾಂ ಸಹಕಾರಿ ಸಂಘ ಪ್ರತಿ ಸದಸ್ಯನಿಗೂ ಅನ್ವಯವಾಗುವಂತೆ ಅಪಘಾತ ವಿಮೆ ಮಾಡಿಸಿದೆ ಎಂದರು.
    ಲೆಕ್ಕ ಪರಿಶೋಧಕ ಸಂತೋಷ ಮಾಗಾವಿ ಮಾತನಾಡಿ, ನೌಕರರ ಸಂಘ ಶೇ.100ರಷ್ಟು ವಸೂಲಾತಿ ಮಾಡುತ್ತಿದ್ದು, ಸದಸ್ಯರಿಗೆ ಅನುಕೂಲವಾಗುವ ಹೊಸ ಯೋಜನೆಗಳನ್ನು ಜಾರಿಗೊಳಿಸಲಿ ಎಂದರು.
    ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ನೌಕರರ ಮಕ್ಕಳಿಗೆ ಗೌರವ ಧನ ನೀಡಿ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಗಣೇಶ ಎಸ್.ಬಿ., ಬಸವರಾಜ ಕೋಟಿ, ಎಸ್.ಎಂ.ಶೆಟ್ಟರ, ಜೆ.ಎಲ್.ಕಮತದ ಸಂಘದ ವರದಿ ಮಂಡಿಸಿದರು.
    ಸಭೆಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಎಸ್..ಬಸವರಾಜಯ್ಯ, ಎಂ.ಎಸ್.ಕುಮ್ಮೂರ, ಎಸ್.ಎಸ್.ಜಿಂಗಾಡೆ, ಎ.ಕೆ.ಯಮನೂರ, ಎನ್.ಟಿ ಹಾವೇರಿ, ಸಿ.ಎನ್.ಬಡ್ಮಿ, ಎ.ಎಚ್.ಸಾಳುಂಕೆ, ಎಚ್.ಎಂ.ನಿಂಬಣ್ಣವರ, ಶಂಕರ ಕೆ., ಬಸವರಾಜ ಕೋಟಿ, ಕರಿಯಪ್ಪ ಅಗಡಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts