More

    ಕೇಕ್ ಕತ್ತರಿಸಿ ರಾಕ್ಷಸ ಹೋರಿ ಬರ್ತ್ ಡೇ; ರಕ್ತದಾನವನ್ನೂ ಮಾಡಿದ ಕೆರಿಮತ್ತಿಹಳ್ಳಿ ಯುವಕರು

    ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮಸ್ಥರ ಅಚ್ಚುಮೆಚ್ಚಿನ ‘ರಾಕ್ಷಸ 220’ ಹೆಸರಿನ ಹೋರಿಯ 8ನೇ ವರ್ಷದ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಹಾಗೂ ರಕ್ತದಾನ ಮಾಡುವ ಮೂಲಕ ವಿಭಿನ್ನವಾಗಿ ಆಚರಿಸಿದ್ದಾರೆ.
    ಗ್ರಾಮದ ರಾಕ್ಷಸ 220 ಹೋರಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆಯೋಜಿಸಿದ್ದ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಗ್ರಾಮ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಜನರ, ಯುವಕರ ಪ್ರೀತಿ ಗಳಿಸಿದೆ. ಹೋರಿಗೆ ಅಪಾರ ಅಭಿಮಾನಿಗಳಿದ್ದು, ಇವರೆಲ್ಲ ಸೇರಿ ಶುಕ್ರವಾರ ಗ್ರಾಮದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಹೋರಿಯ ಜನ್ಮದಿನವನ್ನು ಆಚರಿಸಿದರು.
    ಹೋರಿ ಜನ್ಮದಿನವನ್ನು ಗ್ರಾಮಸ್ಥರೆಲ್ಲ ಹಬ್ಬದ ರೀತಿಯಲ್ಲಿ ಆಚರಿಸಿದರು. ಕೇಕ್, ಸಿಹಿ ಹಂಚಿ ಸಂಭ್ರಮಿಸಿದರು. ಹತ್ತಾರು ಯುವಕರು ರಕ್ತದಾನವನ್ನೂ ಮಾಡುವ ಮೂಲಕ ಭಿಮಾನ ಪ್ರದರ್ಶಿಸಿದರು.
    ಸಮಾರಂಭದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಷತಾ ಕೆ.ಸಿ.,ಹೊನ್ನೇಶ್ವರ ತಗಡಿನಮನಿ, ಬಸವರಾಜ ಟೀಕೆಹಳ್ಳಿ, ಗ್ರಾಪಂ ಸದಸ್ಯರಾದ ಚಂದ್ರಪ್ಪ ಭೀಮಕ್ಕನವರ, ಬಸವರಾಜ ಬಂಕಾಪುರ, ಕೃಷ್ಣಾ ಈಳಗೇರ, ಚೇತನಾ ಶಿಲೇದ, ರೇಖಾ ವಾಲಿ, ಕಮಲವ್ವ ಅತ್ತಿಕಟ್ಟಿ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts