More

    ಸಂವಿಧಾನ ಸಾಕ್ಷಿ ಮದುವೆ 18ರಂದು; ಕಾಗಿನೆಲೆಯಲ್ಲೊಂದು ವಿಶಿಷ್ಟ ವಿವಾಹ

    ಹಾವೇರಿ: ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಫೆ.18ರಂದು ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ‘ಸಂವಿಧಾನ ಸಾಕ್ಷಿ ಮದುವೆ’ ಎಂಬ ವಿಶಿಷ್ಟ ಕಲ್ಪನೆಯ ವಿವಾಹ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾವಸಂಗಮ ವಿವಾಹ ವೇದಿಕೆ ಅಧ್ಯಕ್ಷ ಬಸವರಾಜ ಸೂಳಿಬಾವಿ ಹೇಳಿದರು.
    ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯ ಜೀವನದಲ್ಲಿ ಬಹಳ ಮಹತ್ವವಾದದ್ದು ಮದುವೆ. ಭಾರತೀಯ ಸಮಾಜದಲ್ಲಿ ಮದುವೆ ಎಂಬ ಸಹಜವಾದ ಕ್ರಿಯೆಗೆ ಬಂಧನ ಹಾಕುವ ಕೆಲಸ ಆಗುತ್ತಿದೆ. ಜಾತಿಯ ಚೌಕಟ್ಟು ಹೊರಗಿಟ್ಟು ಮನುಷ್ಯರೇ ಪ್ರಧಾನವಾದದ್ದು ಎಂಬುದನ್ನು ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಬಸವೇಶ್ವರರು, ಕುವೆಂಪು ಅವರಂಥವರು ತೋರಿಸಿಕೊಟ್ಟಿದ್ದಾರೆ ಎಂದರು.
    ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರ ಪುತ್ರ ಪ್ರಶಾಂತ ಮರೆಮ್ಮನವರ ಹಾಗೂ ಆನವಟ್ಟಿಯ ರೇಖಾ ಅವರ ವಿವಾಹವನ್ನು ಸಂವಿಧಾನ ಸಾಕ್ಷಿಯಾಗಿ ಮಾಡಲು ತೀರ್ಮಾನಿಸಲಾಗಿದೆ. ಮದುವೆ ಗಂಡು-ಹೆಣ್ಣು ಸಂವಿಧಾನ ಗ್ರಂಥ ಮುಟ್ಟಿ ಬಾಳ ಸಂವಿಧಾನದ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಂತರ ಪರಸ್ಪರ ಹೂಮಾಲೆ ಬದಲಾಯಿಸುತ್ತಾರೆ. ಸಚಿವ ಸತೀಶ ಜಾರಕಿಹೊಳಿ, ಕೆಪಿಎಸ್‌ಸಿ ಮಾಜಿ ಸದಸ್ಯ ಜಿ.ಟಿ.ಚಂದರಶೇಖರಪ್ಪ, ಸನತಕುಮಾರ ಬೆಳಗಲಿ, ಡಾ.ಅನಸೂಯ ಕಾಂಬಳೆ, ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ವಿನಾಯಕ ಕುರುಬರ, ಮಾಲತೇಶ ಅಂಗೂರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts