More

    ಮೂರು ಚಿನ್ನದ ಪದಕ ಭೇಟೆಯಾಡಿದ ಪ್ರಿಯಾಂಕಾ

    ಹಾವೇರಿ: ತಾಲೂಕಿನ ದೇವಿಹೊಸೂರು ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಿಯಂಕಾ ಎಚ್.ಎಲ್. ನಾಲ್ಕು ವರ್ಷಗಳ ಬಿ.ಟೆಕ್. (ಆಹಾರ ತಂತ್ರಜ್ಞಾನ) ಪದವಿಯ ಮೂರನೇ ಬ್ಯಾಚಿನಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ಮೂಲಕ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಚಿನ್ನದ ಪದಕ ಸೇರಿ ಒಟ್ಟು ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
    ಪದವಿಯಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿರುವ ಪ್ರಿಯಾಂಕಾ ಉತ್ತಮ ವಿದ್ಯಾರ್ಥಿನಿಯಾಗಿ ಆಯ್ಕೆಯಾಗಿ ಮಹಾವಿದ್ಯಾಲಯದ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರ ಚಿನ್ನದ ಪದಕ ಹಾಗೂ ಬೆಂಗಳೂರಿನ ಮೆ.ಇಂಡಸ್ ಮತ್ತು ಬರ್ಫಿ ಕಂಪನಿಯವರಿಂದ ಪ್ರಾಯೋಜಿಸಿರುವ ದಿ.ಸೀತಾ ಭಟ್ ಸ್ಮಾರಕ ಚಿನ್ನದ ಪದಕ ಸೇರಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಮಹಾವಿದ್ಯಾಲಯದ ಕಳೆದ ಮೂರೂ ಬ್ಯಾಚಿನಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಅಂಕ ಪಡೆದು ಪದಕ ಗಳಿಸುತ್ತಿರುವುದು ವಿಶೇಷ.
    ಬಾಗಲಕೋಟೆಯ ತೋಟಗಾರಿಕೆ ವಿವಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 12ನೇ ಘಟಿಕೋತ್ಸವ ಸಮಾರಂಭಲ್ಲಿ ಪ್ರಿಯಾಂಕಾಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪದಕಗಳನ್ನು ಪ್ರದಾನ ಮಾಡಿದ್ದಾರೆ. ಪ್ರಿಯಾಂಕಾ ಸದ್ಯಕ್ಕೆ ಮೈಸೂರಿನ ಸಿ.ಎಫ್.ಟಿ.ಆರ್.ಐ.ನಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಮಿಲ್ಲಿಂಗ್ ಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮುಂದುವರಿಸಿದ್ದಾರೆ ಎಂದು ಮಹಾವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ನಾರಾಯಣ ಹೆಗಡೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts