More

    ಹೆಗ್ಗೇರಿ ಕೆರೆಯಿಂದ ಹಾವೇರಿ ನಗರಕ್ಕೆ ನೀರು ಪೂರೈಕೆ; ಬಳಕೆಗೆ ಮಾತ್ರ ಬಳಸುವಂತೆ ಡಿಸಿ ರಘುನಂದನ ಮೂರ್ತಿ ಮನವಿ

    ಹಾವೇರಿ: ಇಲ್ಲಿನ ಹೆಗ್ಗೇರಿ ಕೆರೆಯಿಂದ ನಗರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಪೈಪ್‌ಲೈನ್ ಜಾಲದ ಮೂಲಕ ನಲ್ಲಿಗಳಿಗೆ ನೀರು ಸರಬರಾಜು ಮಾಡಲಾಗುವುದು. ಈ ನೀರನ್ನು ಜನರು ಕುಡಿಯಲು ಬಳಸಬಾರದು. ಕೇವಲ ಬಳಕೆಗೆ ಮಾತ್ರ ಉಪಯೋಗಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಹಾಗೂ ನಿವಾರಣೆ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕುಡಿಯುವ ನೀರಿಗಾಗಿ ಹರಿಸಲಾಗಿದ್ದ ತುಂಗಭದ್ರಾ ನದಿಯ ನೀರು ಇನ್ನು ಮೂರು ದಿನಗಳಲ್ಲಿ ಖಾಲಿಯಾಗಲಿದೆ. ಕುಡಿಯಲು ನಗರಸಭೆ ಕೊಳವೆಬಾವಿಗಳ ನೀರನ್ನು ಬಳಸಿಕೊಳ್ಳಬಹುದು. ಹೆಗ್ಗೇರಿ ಕೆರೆ ನೀರನ್ನು ಡಬ್ಲ್ಯೂಟಿಪಿಗೆ (ನೀರು ಶುದ್ದೀಕರಣ ಘಟಕ) ಹರಿಸಿ ಪೈಪ್‌ಲೈನ್ ಮೂಲಕ ಮನೆ ಮನೆಗೆ ಸರಬರಾಜು ಮಾಡಲಾಗುವುದು ಎಂದರು.
    ಗ್ರಾಮೀಣ ಪ್ರದೇಶಗಳಲ್ಲಿ 149 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಜನವರಿಯಿಂದ ಈವರೆಗೆ 10 ಲಕ್ಷ ರೂ. ಕೊಳವೆಬಾವಿಗಳಿಗೆ ಬಾಡಿಗೆ ಪಾವತಿಸಲಾಗಿದೆ ಎಂದರು.
    ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ಧರ್ಮಾ ಜಲಾಶಯ ಆಧಾರಿತ ಹಾನಗಲ್ಲ ಪಟ್ಟಣಕ್ಕೆ ನೀರಿನ ಸಮಸ್ಯೆ ಇರುವುದಿಲ್ಲ. ವರದಾ ನದಿ ಆಧಾರಿತ ಕುಡಿಯುವ ನೀರಿನ ಯೋಜನೆಗಳು ಹಾಗೂ ತುಂಗಭದ್ರಾ ಆಧಾರಿತ ನೀರಿನ ಯೋಜನ ಯೋಜನೆಗಳು ಸ್ಥಗಿತಗೊಂಡಿವೆ ಎಂದರು.
    ಭದ್ರಾ ಡ್ಯಾಮ್‌ನಿಂದ ಮತ್ತೆ ನೀರು
    ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮತ್ತೊಮ್ಮೆ ನೀರು ಹರಿಸಲು ನಿರ್ಧರಿಸಲಾಗಿದೆ. ಮುಂದಿನ ವಾರದೊಳಗೆ ನದಿಗೆ ನೀರು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ತುಂಗಭದ್ರಾ ನದಿಗೆ ನೀರು ಬಂದರೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗಲಿದೆ.
    ತುಂಗಭದ್ರಾ ನದಿ ಆಧಾರಿತ ನೀರು ಸರಬರಾಜಾಗುತ್ತಿದ್ದ ರಾಣೆಬೆನ್ನೂರ, ಬ್ಯಾಡಗಿಯಲ್ಲಿ ಪೈಪ್‌ಲೈನ್ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಬೋರವೆಲ್ ಮೂಲಕ ನಗರಸಭೆ ಹಾಗೂ ಪುರಸಭೆ ವತಿಯಿಂದ ನೀರು ಸರಬರಾಜು ಮಾಡಲಾಗುತ್ತದೆ ಎಂದು ಡಿಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts