More

    ಹಿಂಗಾರು, ಬೇಸಿಗೆ ಹಂಗಾಮಿಗೆ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ

    ಹಾವೇರಿ: ಪ್ರಸಕ್ತ 2023-24ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಜಿಲ್ಲೆಯ ಎಲ್ಲ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ 14 ಬೆಳೆಗಳಾದ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಗೋಧಿ (ಮಳೆ ಆಶ್ರಿತ), ಕಡಲೆ (ಮಳೆ ಆಶ್ರಿತ), ಕಡಲೆ (ನೀರಾವರಿ), ಉದ್ದು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ), ಸೂರ್ಯಕಾಂತಿ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಈರುಳ್ಳಿ (ನೀರಾವರಿ) ಮತ್ತು ಟೊಮ್ಯಾಟೊ ಇವುಗಳನ್ನು ಹಿಂಗಾರು ಹಂಗಾಮಿಗೆ ಮತ್ತು ಶೇಂಗಾ (ನೀರಾವರಿ) ತಾಲೂಕು ಮಟ್ಟ, 3 ಬೆಳೆಗಳಾದ ಭತ್ತ (ನೀರಾವರಿ), ನೆಲಗಡಲೆ (ಶೇಂಗಾ) (ನೀರಾವರಿ) ಮತ್ತು ಸೂರ್ಯಕಾಂತಿ (ನೀರಾವರಿ) ಇವುಗಳನ್ನು ಬೇಸಿಗೆ ಹಂಗಾಮಿಗೆ ಅಧಿಸೂಚಿಸಲು ಹಾಗೂ ಇವುಗಳಲ್ಲಿ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಳವಡಿಸಿ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ.
    ಹಿಂಗಾರು ಹಂಗಾಮಿಗೆ ಜೋಳ (ಮಳೆ ಆಶ್ರಿತ), ಜೋಳ (ನೀರಾವರಿ), ಈರುಳ್ಳಿ (ನೀರಾವರಿ), ಕುಸುಬೆ (ಮಳೆ ಆಶ್ರಿತ), ಸೂರ್ಯಕಾಂತಿ (ಮಳೆ ಆಶ್ರಿತ) ಹಾಗೂ ಟೊಮ್ಯಾಟೊ ಬೆಳೆಗಳಿಗೆ ಡಿಸೆಂಬರ್ 1ರೊಳಗಾಗಿ ನೋಂದಾಯಿಸಬೇಕು. ಕಡಲೆ (ಮಳೆ ಆಶ್ರಿತ), ಕಡಲೆ (ನೀರಾವರಿ), ಸೂರ್ಯಕಾಂತಿ (ನೀರಾವರಿ) ಹಾಗೂ ಗೋಧಿ (ಮಳೆ ಆಶ್ರಿತ) ಬೆಳೆಗಳಿಗೆ ಡಿ.5ರೊಳಗಾಗಿ ಹಾಗೂ ಉದ್ದು (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ) ಹಾಗೂ ಮುಸುಕಿನ ಜೋಳ (ನೀರಾವರಿ) ಬೆಳೆಗಳಿಗೆ ಡಿ.30ರೊಳಗಾಗಿ ನೋಂದಾಯಿಸಿಕೊಳ್ಳಬೇಕು.
    ಬೇಸಿಗೆ ಹಂಗಾಮಿಗೆ ಶೇಂಗಾ (ನೀರಾವರಿ), ಭತ್ತ (ನೀರಾವರಿ) ಹಾಗೂ ಸೂರ್ಯಕಾಂತಿ (ನೀರಾವರಿ) ಬೆಳೆಗಳಿಗೆ ಫೆಬ್ರವರಿ 28, 2024 ರೊಳಗಾಗಿ ನೋಂದಾಯಿಸಬೇಕು. ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಕಂದಾಯ ರಶೀದಿ ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಸಂಖ್ಯೆ ನೀಡಬೇಕು. ವಿಮೆ ನೊಂದಣಿ ಮಾಡುವ ಎಲ್ಲ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸಬೇಕು.
    ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಬ್ಯಾಂಕ್‌ಗಳ ಮೂಲಕವೇ ಅಂದರೆ, ವಾಣಿಜ್ಯ ಬ್ಯಾಂಕ್‌ಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳು, ಸಾಮಾನ್ಯ ಸೇವಾ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ನೋಂದಾಯಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶರ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts