More

    ಪ್ರಬಂಧ ಸ್ಪರ್ಧೆಯಲ್ಲಿ ಭೂಮಿಕಾ ಪ್ರಥಮ

    ಹಾವೇರಿ: ಅಗಸ್ತ್ಯ ಪ್ರತಿಷ್ಠಾನದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗರದ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಸೋಮವಾರ ಬಹುಮಾನ ವಿತರಿಸಲಾಯಿತು.
    ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಭೂಮಿಕಾ ಅಕ್ಕಿ, ದೀಪಾ ಗೊಡ್ಡೆಮ್ಮಿ, ಸುಶ್ಮಿತಾ ಧಾರವಾಡ ಹಾಗೂ ಮದಿಯಾ ನದಾಫ ಇವರಿಗೆ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ಪ್ರತಿಷ್ಠಾನದ ಸಂಯೋಜಕ ಮಲ್ಲಿಕಾರ್ಜುನ ಬಳಿಗೇರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಿ, ಅವರಲ್ಲಿ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಬೆಳೆಸುವುದು ಹಾಗೂ ಅವರಲ್ಲಿ ಸಾಂಸ್ಥಿಕ ಪರಾಕ್ರಮವನ್ನು ಹೆಚ್ಚಿಸಲು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುವುದರ ಮೂಲಕ ಶಿಕ್ಷಣದಲ್ಲಿ ಮಹತ್ತರ ಬದಲಾವಣೆಗೆ ಅಗಸ್ತ್ಯ ಫೌಂಡೇಶನ್ ಸದಾ ಪ್ರಯತ್ನಿಸುತ್ತದೆ ಎಂದು ಹೇಳಿದರು.
    ಸಂಯೋಜಕ ವೀರನಗೌಡ ಫಕೀರಗೌಡ ಮಾತನಾಡಿ, ವಿಜ್ಞಾನಿ ರಾಮ್‌ಜಿ ರಾಘವನ್ ಅವರ ದೂರದೃಷ್ಠಿಯಿಂದ ಈ ಸಂಸ್ಥೆ ಸ್ಥಾಪಿಸಲಾಗಿದ್ದು, ದೇಶಾದ್ಯಂತ ಗ್ರಾಮೀಣ ಹಾಗೂ ಅರೆ ನಗರದ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಪರಿಕಲ್ಪನೆಗಳ ಆಧಾರದ ಮೇಲೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಸಂಸ್ಥೆ 700ಕ್ಕೂ ಹೆಚ್ಚು ವಿಜ್ಞಾನ ಕೇಂದ್ರ ಹೊಂದಿದ್ದು ಇಲ್ಲಿಯವರೆಗೆ 12 ಮಿಲಿಯನ್ ಮಕ್ಕಳನ್ನು ತಲುಪಿದೆ ಎಂದು ಹೇಳಿದರು.
    ಮುಖ್ಯೋಪಾಧ್ಯಾಯೆ ಚನ್ನಮ್ಮ ಅಂತರವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶೋಭಾ ನಾಶೀಪುರ, ರೂಪಾ ಟಿ.ಆರ್., ಎಂ.ರುದ್ರೇಶ, ಲೀಲಾವತಿ ಅಂದಾನಿಮಠ, ವಿ.ಬಿ.ಬನ್ನಿಹಳ್ಳಿ, ಎಂ.ಎಸ್.ಹಿರೇಮಠ, ರವಿ ಕರಲಿಂಗಣ್ಣನವರ, ಎಚ್.ಕೆ.ಆಡಿನ, ಆನಂದ ಎಂ., ಮತ್ತಿತರರು ಉಪಸ್ಥಿತರಿದ್ದರು.
    ಸಹನಾ ಪ್ರಾರ್ಥಿಸಿದರು. ಎಸ್.ಎನ್.ಮಳೆಪ್ಪನವರ ಸ್ವಾಗತಿಸಿ, ನಿರ್ವಹಿಸಿದರು. ಎಸ್.ಸಿ.ಮರಳಿಹಳ್ಳಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts