More

    ನವೀಕರಣಗೊಳ್ಳದ ಎಂಟು ಫೈನಾನ್ಸ್ ಕಾರ್ಪೋರೇಷನ್‌ಗಳ ಪರವಾನಿಗೆ ರದ್ದು

    ಹಾವೇರಿ: ಜಿಲ್ಲೆಯಲ್ಲಿ 31, ಮಾರ್ಚ್ 2023ರೊಳಗಾಗಿ ನವೀಕಣಗೊಳಿಸದ ಎಂಟು ಫೈನಾನ್ಸ್ ಕಾರ್ಪೋರೇಷನ್‌ಗಳ ಪರವಾನಗಿಯನ್ನು ರದ್ದುಮಾಡಿ, ಸಂಸ್ಥೆಗಳ ಭದ್ರತಾ ಠೇವಣಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
    ಲೇವಾದೇವಿಗಾರರು, ಗಿರವಿದಾರರು, ಹಣಕಾಸು ಸಂಸ್ಥೆಗಳು ಪರವಾನಗಿ ಪಡೆದು ಪ್ರತಿ ಐದು ವರ್ಷಕ್ಕೊಮ್ಮೆ ನವೀಕಣಗೊಳಿಸುವುದು ಕಡ್ಡಾಯವಾಗಿದೆ. ಹಾಗಾಗಿ, ನವೀಕಣಗೊಳಿಸದ ಫೈನಾನ್ಸ್ ಕಾರ್ಪೋರೇಷನ್‌ಗಳ ಪರವಾನಗಿ ರದ್ದು ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಲೇವಾದೇವಿಗಾರರ ನಿಬಂಧಕರು ಹಾಗೂ ಸಹಕಾರ ದಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
    ಪರವಾನಗಿ ರದ್ದಾದ ಫೈನಾನ್ಸ್‌ಗಳು:
    ಹಿರೇಕೆರೂರ ತಾಲೂಕು ಹಂಸಭಾವಿಯ ಶ್ರೀ ಮೃತ್ಯುಂಜಯ ಫೈನಾನ್ಸ್ ಕಾರ್ಪೋರೇಷನ್, ಮಾಸೂರಿನ ಶ್ರೀ ಸಿದ್ದಲಿಂಗೇಶ್ವರ ಫೈನಾನ್ಸ್ ಕಾರ್ಪೋರೇಷನ್, ಬ್ಯಾಗಡಿ ತಾಲೂಕು ಹೆಡಿಗ್ಗೊಂಡದ ಮೆ॥ಶ್ರೀ ಎ.ಎಸ್.ಡಿ. ಫೈನಾನ್ಸ್ ಕಾರ್ಪೋರೇಷನ್, ರಾಣೆಬೆನ್ನೂರಿನ ಮೇ॥ರಾಜೇಂದ್ರ ಲೇವಾದೇವಿ ಮತ್ತು ಗಿರವಿದಾರರು, ಶ್ರೀ ಸಾಯಿ ಫೈನಾನ್ಸ್ ಕಾರ್ಪೋರೇಷನ್, ಹಾವೇರಿಯ ಸ್ಪೂರ್ತಿ ಫೈನಾನ್ಸ್ ಆ್ಯಂಡ್ ಇನ್‌ವೆಸ್ಟ್‌ಮೆಂಟ್, ಹಡಪದ ಅಪ್ಪಣ್ಣ ಫೈನಾನ್ಸ್ ಲಿ, ಹಾಗೂ ಮೆ॥ವರದಾ ಫೈನಾನ್ಸ್ ಕಾರ್ಪೊರೇಷನ್‌ಗಳ ಪರವಾನಗಿ ರದ್ದುಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts