More

    ವಿಶೇಷ ಕಾರ್ಯಾಚರಣೆಯಲ್ಲಿ 15 ಬೀದಿಬದಿ ಮಕ್ಕಳ ಸಂರಕ್ಷಣೆ

    ಹಾವೇರಿ: ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 12ರಿಂದ ಜ.31ವರೆಗೆ ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಬೀದಿಬದಿ ಮಕ್ಕಳ ಸಂರಕ್ಷಣಾ ಕಾರ್ಯಚರಣೆಯಲ್ಲಿ 18 ಸ್ಥಳಗಳಲ್ಲಿ ದಾಳಿ ನಡೆಸಿ, 15 ಮಕ್ಕಳನ್ನು ರಕ್ಷಿಸಲಾಗಿದೆ.
    ಬಸ್ ನಿಲ್ದಾಣ, ಗ್ಯಾರೇಜ್, ಮಾರುಕಟ್ಟೆ, ಇಟ್ಟಿಗೆ ಭಟ್ಟಿ, ವಲಸೆ ಬಂದ ಸ್ಥಳಗಳು ಸೇರಿದಂತೆ 18 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, 15 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಕ್ಕಳನ್ನು ಹಾಜರುಪಡಿಸಲಾಯಿತು. ಈ ಪೈಕಿ 12 ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. 3 ಮಕ್ಕಳನ್ನು ನಗರದ ಶಕ್ತಿ ತೆರೆದ ತಂಗುದಾಣ ಪಾಲನೆ ಮತ್ತು ರಕ್ಷಣೆಗೆ ದಾಖಲಿಸಲಾಯಿತು. ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅಂಗಡಿಗಳ ಮಾಲಿಕರಿಂದ ದಂಡ ವಸೂಲಿ ಮಾಡಲಾಗಿದೆ. ಆ ಹಣವನ್ನು 3 ಮಕ್ಕಳ ಹೆಸರಲ್ಲಿ ತಲಾ ಎರಡು ಸಾವಿರ ರೂ. ಹಾಗೂ ಓರ್ವ ಬಾಲಕನಿಗೆ 10 ಸಾವಿರ ರೂ.ಯನ್ನು ಪಾಲಕರ ಹಾಗೂ ಮಕ್ಕಳ ಜಂಟಿ ಖಾತೆಗೆ ಜಮೆ ಮಾಡಲಾಗಿದೆ.
    ಕಾರ್ಯಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಹಾಗೂ ಮಕ್ಕಳ ಪಾಲನಾ ಸಂಸ್ಥೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts