More

    ಶಾಲಾ ವಾಹನಗಳ ಮೇಲೆ ನಿಗಾ ವಹಿಸಲು ಪೊಲೀಸರಿಗೆ ಸಿಪಿಐ ಪ್ರಕಾಶ್ ಮಾಳಿ ಸೂಚನೆ

    ಹಟ್ಟಿಚಿನ್ನದಗಣಿ: ವ್ಯಾನ್, ಆಟೋಗಳಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೊಲೀಸರು ಕಡ್ಡಾಯವಾಗಿ ಇಲಾಖೆ ನಿಯಮಗಳನ್ನು ಪಾಲಿಸಬೇಕು ಎಂದು ಹಟ್ಟಿ ಠಾಣೆ ಸಿಪಿಐ ಪ್ರಕಾಶ್ ಮಾಳಿ ಸೂಚಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಸ್ಥಳೀಯ ಶಾಲಾ-ಕಾಲೇಜು ಮುಖ್ಯಸ್ಥರಿಗೆ ಕರೆೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು.

    ಶಾಲಾ ವಾಹನದಲ್ಲಿ ಜಿಪಿಎಸ್ ಅಳವಡಿಕೆ ಸೇರಿದಂತೆ ಚಾಲಕನ ಸಮವಸ್ತ್ರ, ನಡತೆ ಪ್ರಮಾಣಪತ್ರ, ಮಕ್ಕಳೊಂದಿಗೆ ಶಿಷ್ಟಾಚಾರದ ವರ್ತನೆ, ನಿಯಮಿತ ಮಕ್ಕಳನ್ನು ಕರೆದೊಯ್ಯುವ ಕುರಿತು ಎಚ್ಚರ ವಹಿಸಬೇಕು. ಸಂಬಂಧಿಸಿದ ದಾಖಲೆಗಳನ್ನು ಠಾಣೆಗೆ ವಾರದೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು. ಶಾಲೆ ವ್ಯಾಪ್ತಿಯಲ್ಲಿ ಅನಾವಶ್ಯಕ ಅಂಗಡಿ ಮುಂಗಟ್ಟುಗಳು ಮತ್ತು ಮಾದಕ ವಸ್ತುಗಳ ಮಾರಾಟ ನಿಯಂತ್ರಿಸಲು ಇಲಾಖೆ ಕ್ರಮಕೈಗೊಳ್ಳಬೇಕೆಂದು ಸಂತ ಅನ್ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಒತ್ತಾಯಿಸಿದರು.

    ಪಿಎಸ್‌ಐ ರಾಮಲಿಂಗಪ್ಪ, ಸಿಬ್ಬಂದಿ ಹುಚ್ಚರೆಡ್ಡಿ, ಲಕ್ಷ್ಮಣ್, ಶರಣಬಸವ ನಾಯ್ಕ, ಅಮರೇಶ್ ಹಾಗೂ ವಿವಿಧ ಶಾಲೆ ಮುಖ್ಯಸ್ಥರಾದ ಆದಯ್ಯ ಎಸ್. ದಳಪತಿ, ಆನಂದ್, ಅಮರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts