More

    ಕಚೇರಿಗೆ ಬೀಗ ಹಾಕಿದ ಗ್ರಾಪಂ ಸದಸ್ಯರು

    ಹಟ್ಟಿಚಿನ್ನದಗಣಿ: ಪಿಡಿಒ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಹಾಗೂ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯ ರಮೇಶ್ ವೀರಾಪೂರ ನೇತೃತ್ವದಲ್ಲಿ ಕೆಲ ಸದಸ್ಯರು ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಸಮೀಪದ ಗೆಜ್ಜಲಗಟ್ಟಾ ಗ್ರಾಮದಲ್ಲಿ ಸೋಮವಾರ ನಡೆದಿದೆ.

    ಪಿಡಿಒ ಅಮರಗುಂಡಮ್ಮ ಸಕಾಲಕ್ಕೆ ವಾರ್ಡ್ ಸಭೆ, ಗ್ರಾಮಸಭೆ ಹಾಗೂ ಕೆಡಿಪಿ ಸಭೆ ನಡೆಸುತ್ತಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ. ಹಿಂದೆ ರೋಡಲಬಂಡಾ (ಯುಕೆಪಿ) ಗ್ರಾಪಂನಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದರು. 2 ವರ್ಷದಿಂದ ಗೆಜ್ಜಲಗಟ್ಟಾ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ ನಾಯಕರ ಕೃಪ ಕಟಾಕ್ಷ ಹೊಂದಿರುವ ಪಿಡಿಒರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.

    ಪಿಡಿಒರನ್ನು ಬದಲಾಯಿಸಬೇಕೆಂದು ಹಲವು ಬಾರಿ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಪಿಡಿಒ ಬೆಂಬಲಕ್ಕೆ ನಿಂತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಿಡಿಒ ವಿರುದ್ಧ ಸೂಕ್ತ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮಕೈಗೊಳ್ಳಬೇಕು. ಅಭಿವೃದ್ಧಿ ಚಿಂತನೆ ಇರುವ ಪಿಡಿಒರನ್ನು ಗೆಜ್ಜಲಗಟ್ಟಾ ಪಂಚಾಯಿತಿಗೆ ನೇಮಕ ಮಾಡಬೇಕೆೆಂದು ಸದಸ್ಯರಾದ ರುದ್ರಮ್ಮ, ಸಂಜೀವಪ್ಪ, ಬಸವರಾಜ ಭಜಂತ್ರಿ, ಅಯ್ಯಣ್ಣ ನಿಲೋಗಲ್, ಅಮರಪ್ಪ ಕುರ್ಡಿ, ತಿಪ್ಪಣ್ಣ ಹೆಸರೂರು ಆಗ್ರಹಿಸಿದರು. ಹಟ್ಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts