More

    ಕೆರೆಗಳ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಿ

    ಹಾಸನ: ತಾಲೂಕಿನಲ್ಲಿರುವ ಎಲ್ಲ 1091 ಕೆರೆಗಳ ಸರ್ವೇ ನಡೆಸಿ ಒತ್ತುವರಿ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದರು.


    ತಾಲೂಕು ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಕುರಿತ ಸಭೆಯಲ್ಲಿ ಮಾತನಾಡಿ, ನಮ್ಮ ವ್ಯಾಪ್ತಿಯ ಕೆರೆಗಳ ಪೂರ್ಣ ಮಾಹಿತಿಯನ್ನು ಮಾ. 15ರ ಒಳಗೆ ಸಲ್ಲಿಸಬೇಕು. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿಂಗಳಿಗೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಕೆರೆ ಅಭಿವೃದ್ಧಿಗೆ ಕ್ರಮ ವಹಿಸಬೇಕು.


    ಕೆರೆ ತೆರವುಗೊಳಿಸುವ ಸಮಯದಲ್ಲಿ ಅಕ್ಕಪಕ್ಕದ ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಿಸಬೇಕು ಎಂದು ತಿಳಿಸಿದರು.
    ಲೋಕಾಯುಕ್ತ ಉಪ ಅಧೀಕ್ಷಕಿ ಬಾನು ಮಾತನಾಡಿ, ತಾಪಂ ಇಒ ಹಾಗೂ ಪಿಡಿಓಗಳು ಸ್ಥಳದಲ್ಲಿ ಹಾಜರಿದ್ದು ಕೆರೆ ಸರ್ವೇ ಮಾಡಿ ಸುತ್ತ ಚರಂಡಿ ತೆಗೆಸಬೇಕು. ತಿಂಗಳಲ್ಲಿ ಶೇ.80ರಷ್ಟು ಕೆರೆಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ಹೇಳಿದರು.


    ಲೋಕಾಯುಕ್ತ ಇನ್ಸ್‌ಪೆಕ್ಟರ್ ಮಂಜುನಾಥ್ ಮಾತನಾಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು ಹಾಗೂ ಸಹಾಯಕರ ಸಹಕಾರ ಪಡೆದು ಕೆಲಸವನ್ನು ಶೀಘ್ರ ಮುಗಿಸಬೇಕು ಎಂದರು.
    ತಾಪಂ ಇಒ ಯಶವಂತ್, ಸಾಲಗಾಮೆ ಉಪ ತಹಸೀಲ್ದಾರ್ ಯು.ಎಂ. ಮೋಹನ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts