More

    ಮಾಸಾಶನ ತಡೆ ಹಿಡಿಯುವುದು ಸರಿಯಲ್ಲ

    ಶಾಸಕ ಎಚ್.ಡಿ.ರೇವಣ್ಣ ಅಭಿಮತ

    ಹೊಳೆನರಸೀಪುರ: ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರ ನೀಡುವ ಮಾಸಾಶನವು ಜೀವನಕ್ಕೆ ಆಧಾರವಾಗಿರುತ್ತದೆ. ಇಂತಹ ಸನ್ನಿವೇಶವಿರುವಾಗ ಸೂಕ್ತ ದಾಖಲೆ ನೀಡಿಲ್ಲವೆಂದು ತಡೆ ಹಿಡಿಯುವುದು ಸರಿಯಲ್ಲವೆಂದು ಶಾಸಕ ಎಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು.
    ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಅರ್ಹ ಫಲಾನುಭವಿಗಳಿಗೆ ಮಾಸಾಶನ ಆದೇಶ ಪ್ರತಿಗಳನ್ನು ವಿತರಿಸಿ ಮಾತನಾಡಿದರು. ಮಾಸಾಶನ ಪಡೆಯುವಾಗ ದಾಖಲೆಗಳನ್ನು ನೀಡಿರುತ್ತಾರೆ. ಮಾಹಿತಿ ಕೊರತೆಯಿಂದ ಅಗತ್ಯ ದಾಖಲೆ ನೀಡದ ಸಂದರ್ಭದಲ್ಲಿ ಸೂಕ್ತ ತಿಳಿವಳಿಕೆ ನೀಡಬೇಕಾದ್ದು ನಮ್ಮ ಕರ್ತವ್ಯ ಎಂದರು.
    ತಾಲೂಕಿನಲ್ಲಿ ಕಾನೂನು ತೊಡಕಿನಿಂದ ಮೂರು ಸಾವಿರ ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಡೆ ಹಿಡಿಯಲಾಗಿತ್ತು. ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ನಿವಾರಿಸಿ ಮಾಸಾಶನ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ನುಡಿದರು.
    ತಹಸೀಲ್ದಾರ್ ಕೆ.ಆರ್.ಶ್ರೀನಿವಾಸ, ಉಪ ತಹಸೀಲ್ದಾರ್ ಶಿವಕುಮಾರ್, ಆರ್.ಐ.ಸತೀಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಹರೀಶ್ ಬಣಕರ್, ಉದಯ್, ಹೇಮಾ, ರಾಜೇಶ್ವರಿ, ರಂಜಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts