More

    ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ

    ಹಾಸನ: ಬಿತ್ತನೆ ಆಲೂಗಡ್ಡೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂಬ ಉದ್ದೇಶದಿಂದ ತಾಲೂಕಿನ ಸೋಮನಹಳ್ಳಿ ಕಾವಲು ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಕೈಗೊಂಡಿದ್ದ ಅಂಗಾಂಶ ಕೃಷಿ ಯೋಜನೆಯು ಮೂರು ವರ್ಷಗಳ ಪರಿಶ್ರಮದಿಂದ ಯಶಸ್ವಿಯಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಅಂಗಮಾರಿ ರೋಗ, ಕಳಪೆ ಬಿತ್ತನೆ ಬೀಜ ಹಾಗೂ ಹವಾಮಾನ ವೈಪರೀತ್ಯದಿಂದ ಆಲೂಗಡ್ಡೆ ಬೆಳೆಗಾರರು ನಿರಂತರ ನಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತಂದುಕೊಡುತ್ತಿದ್ದ ಆಲೂಗಡ್ಡೆ ಬೆಳೆ ಪ್ರದೇಶ 65 ಸಾವಿರ ಹೆಕ್ಟೇರ್‌ನಿಂದ 8 ಸಾವಿರ ಹೆ.ಗೆ ಇಳಿದಿದೆ. ಆದ್ದರಿಂದ ಬಿತ್ತನೆ ಆಲೂಗಡ್ಡೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಅಂಗಾಂಶ ಕೃಷಿಗೆ ಮೊರೆ ಹೋಗಿದ್ದ ಕೇಂದ್ರದ ವಿಜ್ಞಾನಿಗಳು ಅದರಲ್ಲಿ ಯಶಸ್ಸು ಕಂಡಿದ್ದು ಮುಂದಿನ ಹಂಗಾಮಿಗೆ ಈ ಬಿತ್ತನೆ ಬೀಜ ವಿತರಿಸಲು ಯೋಜನೆ ರೂಪಿಸಿದ್ದಾರೆ. ಪ್ರಾಯೋಗಿಕವಾಗಿ ಅರಸೀಕೆರೆ ತಾಲೂಕಿನ ಬಾಗೇಶಪುರ, ಕೋಡಿಹಳ್ಳಿ, ಹಾಸನದ ತೇಜೂರು ಭಾಗದ ಕೆಲ ರೈತರಿಗೆ ನೀಡಿದ ಬಿತ್ತನೆ ಬೀಜಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಅಂಗಾಂಶ ಕೃಷಿ ಪ್ರಕ್ರಿಯೆ:
    ಕೇಂದ್ರದ ಎರಡು ಗುಂಟೆ ಜಾಗದಲ್ಲಿ ಅಂಗಾಂಶ ಕೃಷಿ ಪ್ರಯೋಗಾಲಯ ಮತ್ತು ಹಸಿರು ಮನೆ ನಿರ್ಮಿಸಿದ್ದು ಸಸಿಗಳನ್ನು ಉತ್ಪಾದಿಸಿ ನಂತರ ತಾಯಿ ಮಡಿಗಳಲ್ಲಿ ನಾಟಿ ಮಾಡಲಾಗುತ್ತದೆ. 20 ದಿನಗಳ ನಂತರ ಎಳೆಯ ಮೂರು ಎಲೆಗಳುಳ್ಳ ಕುಡಿ ಕಾಂಡ ಕಡ್ಡಿಗಳನ್ನು ಚಿವುಟಲಾಗುತ್ತದೆ. ವಾರಕ್ಕೊಮ್ಮೆ 7 ರಿಂದ 8 ಕುಡಿ ಕಾಂಡ ಕಡ್ಡಿಗಳನ್ನು ಚಿವುಟಿ ನಂತರ 98 ಕುಳಿಗಳುಳ್ಳ ಪ್ಲಾಸ್ಟಿಕ್ ಚೀಲದಲ್ಲಿರಿಸಿ ಅದಕ್ಕೆ ಚೆನ್ನಾಗಿ ಕೊಳೆತ ಕೊಕೋಪಿಟ್ ಮಿಶ್ರಣ ತುಂಬಿ ಕುಡಿಕಾಂಡ ಕಡ್ಡಿಗಳನ್ನು ನಾಟಿ ಮಾಡಿದ ಬಳಿಕ 12 ರಿಂದ 15 ದಿನಗಳ ನಂತರ ಸಸಿಗಳು ನಾಟಿ ಮಾಡಲು ಸಿದ್ಧಗೊಳ್ಳುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts