More

    ಮತ್ತೆ 11 ಜನರಿಗೆ ಕರೊನಾ

    ಹಾಸನ: ಅರಕಲಗೂಡಿನ 5 ವರ್ಷದ ಬಾಲಕ ಸೇರಿ ಶನಿವಾರ 11 ಜನರಿಗೆ ಕರೊನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ.


    ಹೊಸದಾಗಿ ಹಾಸನದಲ್ಲಿ 2, ಚನ್ನರಾಯಪಟ್ಟಣ 7, ಅರಕಲಗೂಡು ಹಾಗೂ ಹೊಳೆನರಸೀಪುರದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಕರೊನಾದಿಂದ ಗುಣಮುಖರಾಗಿ 184 ಜನ ಬಿಡುಗಡೆಯಾಗಿದ್ದು 52 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ 20 ನಿರ್ಬಂಧಿತ ವಲಯಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.


    ಗ್ರಾಮ ಸೀಲ್ ಡೌನ್: ಜೂನ್ 7 ರಂದು ಮದುವೆ ಮಾತುಕತೆಗಾಗಿ ಕೆ.ಆರ್.ಪೇಟೆಯಿಂದ ಅರಕಲಗೂಡು ತಾಲೂಕಿನ ಗ್ರಾಮವೊಂದಕ್ಕೆ ಬಂದಿದ್ದ ಸಂಬಂಧಿಕರಿಂದ 5 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಜೂ.10 ರಂದು ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಬಾಲಕನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಆತನ ವರದಿ ಪಾಸಿಟಿವ್ ಆಗಿದ್ದು, ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಆತನ ಕುಟುಂಬಸ್ಥರನ್ನು ಪ್ರಾಥಮಿಕ ಸಂಪರ್ಕಿತರೆಂದು ಪರಿಗಣಿಸಿ ಕೋವಿಡ್-19 ಆಸ್ಪತ್ರೆಗೆ ದಾಖಸಲಾಗಿದೆ ಎಂದರು.
    ಹೆಂಡತಿ, ಪುತ್ರನಿಗೆ ಸೋಂಕು: ಕೋವಿಡ್-19ನಿಂದ ಸಾವಿಗೀಡಾದ ಹಾಸನ ತಾಲೂಕಿನ 60 ವರ್ಷದ ವೃದ್ಧನ ಹೆಂಡತಿ (52) ಹಾಗೂ ಪುತ್ರನಿಗೆ (29) ಕರೊನಾ ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ ಬಂದಿದ್ದ ಮೃತರ ಮತ್ತೊಬ್ಬ ಪುತ್ರನಿಗೆ ಎರಡು ದಿನಗಳ ಹಿಂದೆ ಕರೊನಾ ದೃಢಪಟ್ಟಿದೆ. ಆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಹೇಳಿದರು.


    ಮುಂಬೈನಿಂದ ರೈಲಿನಲ್ಲಿ ಬೆಂಗಳೂರಿಗೆ 7 ಜನರೊಂದಿಗೆ ಬಂದಿದ್ದ ಹೊಳೆನರಸೀಪುರದ ವ್ಯಕ್ತಿಯೊಬ್ಬರಿಗೆ ಕರೊನಾ ಸೋಂಕು ತಗುಲಿದೆ. ಆರು ಜನರ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.


    ಮುಂಬೈನಿಂದ ಕಾರಿನಲ್ಲಿ ಚನ್ನರಾಯಪಟ್ಟಣಕ್ಕೆ ಬಂದ 24 ವರ್ಷದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಮೂರು ಜನರೊಂದಿಗೆ ಕಾರಿನಲ್ಲಿ ಮುಂಬೈನಿಂದ ಬಂದಿದ್ದ ಚನ್ನರಾಯಪಟ್ಟಣದ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹರಡಿದೆ. ಮಹಾರಾಷ್ಟ್ರದಿಂದ ಜೂ.8 ರಂದು 15 ಜನರು ಒಟ್ಟಾಗಿ ಬಂದು ಕ್ವಾರಂಟೈನ್‌ನಲ್ಲಿದ್ದವರಲ್ಲಿ 5 ಜನರಿಗೆ ಸೋಂಕು ದೃಢಪಟ್ಟಿದೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಇವರಿಗೆ ಎರಡನೇ ಪರೀಕ್ಷೆಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದರು.


    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ಸತೀಶ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts