More

    ಮೋದಿಯವರು ದೀಪ ಹಚ್ಚಲು ಹೇಳಿದ್ದನ್ನು ರಾಜಕೀಯವಾಗಿ ವಿಶ್ಲೇಷಿಸಿದ ಎಚ್​. ಡಿ.ಕುಮಾರಸ್ವಾಮಿ; ಇದೊಂದು ರಹಸ್ಯ ಕಾರ್ಯಸೂಚಿ ಎಂದ ಮಾಜಿ ಸಿಎಂ

    ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ 9 ನಿಮಿಷ ದೀಪ ಹಚ್ಚಲು ಹೇಳಿದ್ದಕ್ಕೆ ಅದೆಷ್ಟೋ ಮಂದಿ ವಿಧವಿಧದ ಕಾರಣ ಹುಡುಕುತ್ತಿದ್ದಾರೆ.

    ಕರೊನಾ ಅಂಧಕಾರದ ವಿರುದ್ಧದ ಹೋರಾಟದಲ್ಲಿ ಯಾರೂ ಒಂಟಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಇರೋಣ ಎಂಬ ಸಂದೇಶ ಸಾರುವ ಸಲುವಾಗಿ ದೀಪ ಹಚ್ಚೋಣ ಎಂದು ಮೋದಿಯವರು ಹೇಳಿದ್ದರೂ ಅದನ್ನು ನಂಬಲು ಯಾರೂ ಸಿದ್ಧರಿಲ್ಲ. ಇಲ್ಲ, ಏನೋ ಕಾರಣ ಇದೆ ಎನ್ನುತ್ತಿದ್ದಾರೆ. ಹಾಗೇ ದೀಪ ಹಚ್ಚಿದರೆ ಕರೊನಾ ಹೋಗುತ್ತದಾ ಎಂದು ವ್ಯಂಗ್ಯವನ್ನೂ ಮಾಡುತ್ತಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೇ ಯಾಕೆ ದೀಪ ಬೆಳಗಲು ಹೇಳಿದರು ಎಂಬುದನ್ನು ಅನೇಕರು ಆಧ್ಯಾತ್ಮಿಕ, ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅದಕ್ಕೊಂದು ರಾಜಕೀಯ ಅರ್ಥ ನೀಡಿದ್ದಾರೆ. ಬಿಜೆಪಿ ವಿರುದ್ಧ ಸರಣಿ ಟ್ವೀಟ್​ ಮಾಡಿದ್ದಾರೆ.

    ಬಿಜೆಪಿಯ ಸಂಸ್ಥಾಪನಾ ದಿನ ಆಚರಣೆ ಮಾಡುವುದಕ್ಕೋಸ್ಕರ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ಸಂಕಷ್ಟವನ್ನು ಉಪಯೋಗಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

    ಏ.6 ಬಿಜೆಪಿಯ ಸಂಸ್ಥಾಪನಾ ದಿನ. ಏ.5ಕ್ಕೆ ಬಿಜೆಪಿಗೆ 40 ವರ್ಷ ಪೂರ್ಣವಾಗುತ್ತದೆ. ಸಂಸ್ಥಾಪನಾ ದಿನದ ಸಂಭ್ರಮವನ್ನು ನೇರವಾಗಿ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನರ ಕೈಯಲ್ಲಿ ದೀಪ ಬೆಳಗಿಸಿ, ತನ್ನ ಭಂಡತನವನ್ನು ಮೆರೆಯುತ್ತಿದೆಯೇ ಎಂದು ಟ್ವಿಟರ್​ನಲ್ಲಿ ಕೇಳಿದ್ದಾರೆ.

    ದೇಶದಕ್ಕೆ ಬಂದಿರುವ ಕರೊನಾ ಸಂಕಟವನ್ನು ಬಗೆಹರಿಸುವ ಯಾವುದೇ ಮಾರ್ಗೋಪಾಯಗಳನ್ನೂ ಮೋದಿಯವರು ಹೇಳತ್ತಿಲ್ಲ. ಹೀಗಿರುವಾಗ ದೀಪ ಹಚ್ಚಲು ಏ.5ನ್ನೇ ಆಯ್ಕೆ ಮಾಡಿಕೊಳ್ಳಲು ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಮೋದಿ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

    ದೇಶ ಹಿಂದೆಂದೂ ಇಂತಹ ಕಷ್ಟನ್ನು ಕಂಡಿರಲಿಲ್ಲ. ಹೀಗಿರುವಾಗ ದೀಪ ಬೆಳಗಿಸಿ, ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ತೋರಿಕೆಯ ಸಂಭ್ರಮ ಬೇಕೇ?

    ಇಡೀ ಜಗತ್ತು ಕರೊನಾ ಮಹಾಮಾರಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ ಎಂದು ಟೀಕಾತ್ಮಕವಾಗಿ ಪ್ರಶ್ನಿಸಿರುವ ಎಚ್​.ಡಿ.ಕುಮಾರಸ್ವಾಮಿ,
    ಕರುಣಾಳು ಬಾ ಬೆಳಕೆ
    ಮುಸುಕಿದೀ ಮಬ್ಬಿನಲಿ..
    ಕೈ ಹಿಡಿದು
    ನಡೆಸೆನ್ನನು..ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ದೂಷಿಸಿದ್ದಾರೆ.

    ಮೋದಿಯವರು ದೀಪ ಹಚ್ಚಲು ಹೇಳಿದ್ದನ್ನು ರಾಜಕೀಯವಾಗಿ ವಿಶ್ಲೇಷಿಸಿದ ಎಚ್​. ಡಿ.ಕುಮಾರಸ್ವಾಮಿ; ಇದೊಂದು ರಹಸ್ಯ ಕಾರ್ಯಸೂಚಿ ಎಂದ ಮಾಜಿ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts