More

    ಕಾಂಗ್ರೆಸ್‌ಗೆ ಬಿಗ್​‌ ಶಾಕ್! ಭ್ರಷ್ಟಾಚಾರದ ತನಿಖೆಗೆ ಗ್ರೀನ್‌ ಸಿಗ್ನಲ್ ಕೊಟ್ಟ ಹರಿಯಾಣ

    ನವದೆಹಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಗಾಂಧಿ ಕುಟುಂಬದ ರಾಜೀವ್ ಗಾಂಧಿ ಫೌಂಡೇಷನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್ ಕುರಿತಂತೆ ತನಿಖೆ ನಡೆಸಲು ಹರಿಯಾಣ ಸರ್ಕಾರ ಹಸಿರುನಿಶಾನೆ ತೋರಿದೆ.

    ಈ ಕುಟುಂಬದ ಒಡೆತನದ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಹರಿಯಾಣ ಮುಖ್ಯ ಕಾರ್ಯದರ್ಶಿ ಕೇಶ್ನಿ ಆನಂದ್ ಅರೋರಾ ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ. ಈ ಟ್ರಸ್ಟ್‌ ಕುರಿತು ತನಿಖೆ ನಡೆಸಲು ಗೃಹ ಸಚಿವಾಲಯ (ಎಂಎಚ್‌ಎ) ಒಂದು ಸಮಿತಿಯನ್ನು ರಚಿಸಿದ್ದು, ಅದೀಗ ತನಿಖೆ ಆರಂಭಿಸಲಿದೆ.

    ಇದನ್ನೂ ಓದಿ: ಇಂದಿರಾ ಟು ಸೋನಿಯಾ: ತನಿಖಾ ಸಮಿತಿಯಿಂದ ಭ್ರಷ್ಟ ಮುಖ ಬಯಲು!

    ಈ ಮೂರು ಟ್ರಸ್ಟ್‌ ಹೆಸರಿನಲ್ಲಿ ಗಾಂಧಿ ಕುಟುಂಬದವರು ನೂರಾರು ಕೋಟಿ ವಂಚನೆ ಮಾಡಿರುವುದು ಹೇಗೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿ ಬಹಿರಂಗಗೊಳಿಸಿತ್ತು. ಅದರ ಬೆನ್ನಲ್ಲೇ ಇದೀಗ ಇಂಥದ್ದೊಂದು ಆದೇಶ ಹೊರಡಿಸಲಾಗಿದೆ. ಮನಿಲ್ಯಾಂಡರಿಂಗ್, ಆದಾಯ ತೆರಿಗೆ ಕಾಯ್ದೆ ಹಾಗೂ ವಿದೇಶಿ ಕೊಡುಗೆಗಳ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿರುವ ಈ ಟ್ರಸ್ಟ್‌ಗಳು ಸಿಲುಕಿವೆ.

    ಭೂಪೇಂದ್ರ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಹರಿಯಾಣದಲ್ಲಿ ಅಧಿಕಾರದಲ್ಲಿದ್ದಾಗ 2004 ಮತ್ತು 2014ರ ನಡುವೆ ಗಾಂಧಿ ಕುಟುಂಬ ಸ್ವಾಧೀನಪಡಿಸಿಕೊಂಡ ಆಸ್ತಿಗಳ ಬಗ್ಗೆ ತನಿಖೆ ನಡೆಸಲು ಹರಿಯಾಣ ಸರ್ಕಾರ ಆದೇಶಿಸಿದೆ.

    ನೆಹರೂ-ಗಾಂಧಿ ಕುಟುಂಬದ ಒಡೆತನದ ಆಸ್ತಿ ಮತ್ತು ಇತರ ಆಸ್ತಿಗಳನ್ನು ಪಟ್ಟಿ ಮಾಡುವಂತೆ ನಗರ ಸ್ಥಳೀಯ ಸಂಸ್ಥೆಗಳ ಇಲಾಖೆಯನ್ನು ಕೇಶ್ನಿ ಆನಂದ್ ಅರೋರಾ ಕೇಳಿಕೊಂಡಿರುವುದಾಗಿ ಹೇಳಲಾಗಿದೆ.

    ಪಾಸಿಟಿವ್‌-ನೆಗೆಟಿವ್‌: ಯಾವುದು ನಂಬ್ಲಿ ಸರ್‌? ರಿಪೋರ್ಟ್‌ ನಂಬೋದಾದ್ರೂ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts