More

    ಮುಖ್ಯ ರಸ್ತೆಯ ಅಗಲೀಕರಣಕ್ಕೆ ವಿರೋಧ

    ಹರಪನಹಳ್ಳಿ: ತಾಲೂಕಿನ ಹಲುವಾಗಲು ಗ್ರಾಮದ ಜಿಲ್ಲಾ ಮುಖ್ಯ ರಸ್ತೆಯ ಅಗಲೀಕರಣ ವಿರೋಧಿಸಿ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಜೆಸಿಬಿ ಯಂತ್ರಗಳ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು.

    ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಲುವಾಗಲು ಮುಖ್ಯ ರಸ್ತೆ ಅಗಲೀಕರಣಕ್ಕೆ ವಿರೋಧಿಸಿ ಹಲವಾರು ಬಾರಿ ಹೋರಾಟ ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ, ಗ್ರಾಪಂಗೆ ಹಾಗೂ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳದೆ ಸ್ಥಳೀಯ ನಿವಾಸಿಗರ ಜೀವನಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    ಜಿಲ್ಲಾ ಮುಖ್ಯ ರಸ್ತೆಯಾಗಿರುವುದರಿಂದ, ಸರ್ಕಾರದ ನಿಯಮಾನುಸಾರ ಲೋಕೋಪಯೋಗಿ ಇಲಾಖೆ ಆರಂಭದಲ್ಲಿ 130 ಅಡಿ ಅಗಲ ರಸ್ತೆಯನ್ನು ವಿಸ್ತರಣೆ ಮಾಡಬೇಕಾಗಿತ್ತು ಆದರೆ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ಅನುಗುಣವಾಗಿ ರಸ್ತೆ ಮಧ್ಯದಿಂದ 25 ಅಡಿಯಂತೆ, ಒಟ್ಟು 50 ಅಡಿ ರಸ್ತೆ ಅಗಲೀಕರಣಕ್ಕೆ ಗ್ರಾಪಂ ಮುಂದಾಗಿತ್ತು. ಆದರೇ ಇದಕ್ಕೆ ಗ್ರಾಮಸ್ಥರು, ಸ್ಥಳೀಯ ನಿವಾಸಿಗಳು ಕಾಮಗಾರಿಗೆ ತಡೆದು ಪ್ರತಿಭಟನೆ ನಡೆಸಿದರು.

    ಗ್ರಾಪಂ ಅಧ್ಯಕ್ಷ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರ ಮನವೊಲಿಸಿದರು. ಅಂತಿಮವಾಗಿ 23ಅಡಿ ಅಗಲೀಕರಣಕ್ಕೆ ಗ್ರಾಪಂ ಠರಾವು ಆದ ಬಳಿಕವೇ ಕಾಮಗಾರಿ ನಡೆಯಲಿದೆ ಎಂದರು. ಹುಲಿಕಟ್ಟಿ ರಾಜಪ್ಪ, ರಹಮತ್, ಕಲ್ಲಹಳ್ಳಿ ಗೋಣೆಪ್ಪ, ಪ್ರಕಾಶ್, ಸತ್ತೂರು ಮಹಾದೇವಪ್ಪ, ರಮೇಶ, ಹನುಮಂತಪ್ಪ, ಮಾರುತಿ ಇತರರು ಇದ್ದರು.

    ಇಲಾಖೆಯ ನಿಯಮದಂತೆ ಹಾಗೂ ಶಾಸಕರು ಮತ್ತು ಗ್ರಾಪಂ ತೀರ್ಮಾನದಂತೆ 25 ಅಡಿ ಅಗಲ ರಸ್ತೆ ಅಗಲೀಕರಣ ಮಾಡಬೇಕಾಗಿತ್ತು. ಆದರೆ ಗ್ರಾಮಸ್ಥರು ಇದಕ್ಕೆ ವಿರೋಧವ್ಯಕ್ತಪಡಿಸಿದ್ದರಿಂದ 23 ಅಡಿ ಅಗಲೀಕರಣಕ್ಕೆ ಒಪ್ಪಿದ ಬಗ್ಗೆ ಮಾಹಿತಿ ತಿಳಿದಿದೆ. ಈ ಬಗ್ಗೆ ಗ್ರಾಪಂ ಠರಾವು ಆಗಿ ನಮಗೆ ನೀಡಿದಲ್ಲಿ ರಸ್ತೆ ಅಗಲೀಕರಣ ಆರಂಭಿಸಲಾಗುವುದು.
    | ಸತೀಶಪಾಟೀಲ್, ಎಇಇ, ಲೋಕೋಪಯೋಗಿ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts