More

    ನಿವೇಶನ ,ವಸತಿ ರಹಿತ ಕುಟುಂಬಕ್ಕೆ ಸೂರು ಕಲ್ಪಿಸಿ

    ಹರಪನಹಳ್ಳಿ: ತಾಲೂಕಿನ ಮತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ಕಾರ್ಯಕರ್ತರು ಗುರುವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಸಿಪಿಐ ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ವಸತಿ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಮತ್ತಿಹಳ್ಳಿ ಗ್ರಾಪಂಯಲ್ಲಿ ಬರುವ ಬಡವರಿಗೆ ನಿವೇಶನಕ್ಕಾಗಿ ಅಗತ್ಯವಿರುವ ಭೂಮಿ ಲಭ್ಯತೆ ಇದ್ದರೂ, ಅಧಿಕಾರಿ ಜನಪ್ರತಿನಿಧಿಗಳು ಕುಂಟು ನೆಪ ಹೇಳುವ ಮೂಲಕ ನಿವೇಶನಗಳನ್ನು ಹಂಚುವಲ್ಲಿ ವಿಫಲವಾಗಿದ್ದಾರೆ. ನಿವೇಶನ ಹೊಂದಿರುವ ಕುಟುಂಬಗಳಿಗೆ ಮನೆ ಮಂಜೂರಾಗಿದ್ದರೂ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ನೀತಿಗಳು ಅಡ್ಡಿಯಾಗುತ್ತಿವೆ ಎಂದು ದೂರಿದರು.

    ಮತ್ತಿಹಳ್ಳಿ ಗ್ರಾಪಂವ್ಯಾಪ್ತಿಯ ಸರ್ವೇ ನಂಬರ್ 341/ಬಿ 4.31 ಎಕರೆ ನಿವೇಶನಕ್ಕಾಗಿ ಕಾಯ್ದಿರಿಸಿದ ಭೂಮಿಯಲ್ಲಿ ಗ್ರಾಮದ ಬಡ ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ಸಣ್ಣ ರೈತರಿಗೆ, ದೇವದಾಸಿ ಮಹಿಳೆಯರಿಗೆ, ನಿವೇಶನ ಸಹಿತ ವಸತಿ ಕಲ್ಪಿಸಬೇಕು. ಒಂದು ವೇಳೆ ಭೂಮಿ ಕಡಿಮೆಯಾದರೆ ಭೂಮಿಯನ್ನು ಖರೀದಿ ಮಾಡಿ ವ್ಯವಸ್ಥೆ ಕಲ್ಪಿಸಬೇಕು ಎಂದರು.

    ಹಕ್ಕೊತ್ತಾಯಗಳು: ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತು ಹೊಸದಾಗಿ ಅರ್ಜಿ ಸಲ್ಲಿಸುವ ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳಬೇಕು. ಮಂಜೂರಾದ ವಸತಿ ಯೋಜನೆಗಳಿಗೆ ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಹಾಲಿ ನಿವೇಶನದ ವಿಸ್ತೀರ್ಣವನ್ನು ಹೆಚ್ಚಿಸಿ ಕನಿಷ್ಠ 1000 ಚ.ಅಡಿ ನೀಡಬೇಕು. ವಸತಿ ಯೋಜನೆಯ ಸಹಾಯಧನದ ಮೊತ್ತವನ್ನು ಕನಿಷ್ಠ 5ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts