More

    ಹೋರಾಟ ಮನೋಭಾವ ಅಳವಡಿಸಿಕೊಳ್ಳಿ; ಶಾಸಕ ಜಿ.ಕರುಣಾಕರರೆಡ್ಡಿ ಸಲಹೆ

    ಹರಪನಹಳ್ಳಿ: ಬ್ರಿಟಿಷರ ವಿರುದ್ಧ್ದ ವೀರಾವೇಶದಿಂದ ಹೋರಾಡಿದ ಏಕೈಕ ಮಹಿಳೆ ಕಿತ್ತೂರು ರಾಣಿ ಚನ್ನಮ್ಮನವರ ಜಯಂತಿ ಆಚರಣೆ ಮೂಲಕ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.

    ಪಟ್ಟಣದ ಸಾಮಾರ್ಥ್ಯಸೌಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬ್ರಿಟಿಷರು ನಮ್ಮ ದೇಶಕ್ಕೆ ವ್ಯಾಪಾರಕ್ಕೆ ಬಂದು, ನಮ್ಮ ದೇಶವನ್ನು ಕೈಗೆತೆಗೆದುಕೊಳ್ಳು ಪ್ರಯತ್ನಿಸಿದರು.ಅನೇಕ ರಾಜರು ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣ ಬಲಿ ಕೊಟ್ಟಿದ್ದು ಸ್ಮರಿಸಬಹುದಾಗಿದೆ. ರಾಣಿ ಚನ್ನಮ್ಮನರ ಸಾಹಸ, ಧೈರ್ಯ ಹಾಗೂ ಹೋರಾಟ ಮನೋಭಾವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಂಚಮಸಾಲಿ ಸಮಾಜದವರು ಕೆಲವು ವೃತ್ತಗಳಿಗೆ ರಾಣಿಚನ್ನಮ್ಮ ಹೆಸರು ಇಡಲು ಮನವಿ ಮಾಡಿದ್ದು ಈ ಬಗ್ಗೆ ಪುರಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

    ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಮಾತನಾಡಿ, ಇತಿಹಾಸವನ್ನು ಯಾರು ಅರಿತುಕೊಳ್ಳುವುದಿಲ್ಲವೋ, ಅವರು ಏನೂ ಮಾಡಲಾರರು. ಭಾರತದ ಸಂಸ್ಕೃತಿ, ಚರಿತ್ರೆಯನ್ನು ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ ಎಂದರು.
    ತಾಲೂಕು ಪಂಚಾಮಸಾಲಿ ಸಮಾಜದ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ ಮಾತನಾಡಿದರು. ಸಿಆರ್‌ಪಿ ಅಣ್ಣಪ್ಪ ಹಾರಕನಾಳು ಕಿತ್ತೂರು ರಾಣಿ ಚನ್ನಮ್ಮನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಪಂಚಮಸಾಲಿ ಸಮುದಾಯದ ಬಂಧುಗಳಿಂದ ರಾಣಿ ಚನ್ನಮ್ಮರ ಭಾವಚಿತ್ರ ಮೆರವಣಿಗೆ ಜರುಗಿತು.

    ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ, ಪುರಸಭೆ ಸದಸ್ಯರಾದ ಜಾಕೀರ್ ಸರ್ಖಾವಸ್, ಎಂ.ಕೆ.ಜಾವೀದ್, ತಹಸೀಲ್ದಾರ್ ಶಿವಕುಮಾರ ಬಿರಾದಾರ್, ತಾಪಂ ಇಒ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಸಿಪಿಐ ಕಮ್ಮಾರ ನಾಗರಾಜ, ತಾಲೂಕು ಪಂಚಮಸಾಲಿ ಮುಖಂಡರಾದ ಅರುಂಡಿ ನಾಗರಾಜ, ಡಾ.ಸುವರ್ಣ ನಾಗರಾಜ, ಪೂಜಾರ ಚಂದ್ರಶೇಖರ, ಎ.ಜಿ.ಮಂಜುನಾಥ, ಸಿದ್ದಲಿಂಗಪ್ಪ, ಬಾಗಳಿ ಕೊಟ್ರೇಶಪ್ಪ, ಚನ್ನನಗೌಡ, ಓಂಕಾರಗೌಡ, ಎಸ್.ಸುರೇಶ್, ಉಮಾ, ಶ್ರೀಮತಿ ಕೊಟ್ರೇಶ್, ಬಸವರಾಜ, ಕೆಇಬಿ ವೀರಣ್ಣ, ಎನ್.ಮಂಜುನಾಥ, ವಿರೇಶ್, ಮಹೇಶ ಪೂಜಾರ, ಪಂಪಣ್ಣ, ಕೆ.ಕೊಟ್ರೇಶ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts