More

    ಸುಸಜ್ಜಿತ ಗ್ರಂಥಾಲಯ ನಿರ್ಮಾಣ

    ಹರಪನಹಳ್ಳಿ: ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿರುವ ಗಾಂಧಿ ಮೆಮೋರಿಯಲ್ ಹಾಲ್ ಅನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

    ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ನಿಮಿತ್ತ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಾಂಧಿ ಮೆಮೋರಿಯಲ್ ಹಾಲ್‌ನಲ್ಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲರ್ಪಣೆ ಮಾಡಿ ಸೋಮವಾರ ಮಾತನಾಡಿದರು.

    ಕೆಕೆಆರ್‌ಡಿಬಿ ಯೋಜನೆಯಡಿ ಮಹಾತ್ಮ ಗಾಂಧೀಜಿ ಸೇರಿದಂತೆ ಇತರ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಸಾರುವ ಪುಸ್ತಕಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯ ಸ್ಥಾಪನೆ ಮಾಡಲಾಗುವುದು. ಸ್ವಾತಂತ್ರೃ ಹೋರಾಟ ಕಾಲದಲ್ಲಿ ಇಲ್ಲಿ ಒಂದು ದಿನ ಉಳಿದುಕೊಂಡಿದ್ದ ಗಾಂಧೀಜಿ ಸ್ಮರಣಾರ್ಥ ಸಹೋದರ ದಿ.ಎಂ.ಪಿ.ರವೀಂದ್ರ ಶಾಸಕರಾಗಿದ್ದಾಗ ಗಾಂಧಿಯ ಏಕಶಿಲಾ ಮೂರ್ತಿ ಸ್ಥಾಪಿಸಿದ್ದು, ನಾನು ಹೆಚ್ಚಿನ ಅಭಿವೃದ್ಧಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಸಂಪನ್ಮೂಲ ಶಿಕ್ಷಕ ಎಚ್.ಸಲೀಂ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹಾದುರ್ ಶಾಸ್ತ್ರಿ ಅವರನ್ನು ಅರ್ಥಮಾಡಿಕೊಂಡರೆ ಜೀವನದಲ್ಲಿ ಬದಲಾವಣೆ ಸಾಧ್ಯ. ಗಾಂಧಿ ನುಡಿದಂತೆ ನಡೆದ ಮೇರು ವ್ಯಕ್ತಿ ಎಂದರು.

    ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ ಮಾತನಾಡಿದರು. ಪ್ರಮುಖರಾದ ಮಂಜುನಾಥ ಇಜಾಂತಕರ, ಭರತೇಶ, ಯಲ್ಲಮ್ಮ, ವಸಂತಪ್ಪ, ಇಸ್ಮಾಯಿಲ್ ಎಲಿಗಾರ, ಷಣ್ಮುಖಪ್ಪ, ಗಿರಜ್ಜಿ ಮಂಜುನಾಥ, ಬೆನಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts