More

    ಭಾರತೀಯತೆಗಾಗಿ ಹೋರಾಟ ಅನಿವಾರ್ಯ

    ಹರಿಹರ: ಭಾರತೀಯತೆ ಇಲ್ಲದ ಮನಸ್ಥಿತಿ ಕ್ಯಾನ್ಸರ್ ಇದ್ದ ಹಾಗೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದು ವಾಗ್ಮಿ ಕುಮಾರಿ ಚೈತ್ರಾ ಕುಂದಾಪುರ ಹೇಳಿದರು.

    ನಗರದ ಹಿಂದು ಮಹಾ ಗಣಪತಿ ಸಮಿತಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತ ನಮ್ಮ ಪರಂಪರೆ, ಧರ್ಮ, ಗೋಮಾತೆ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಮತ್ತೊಮ್ಮೆ ಸ್ವಾತಂತ್ರೃ ಹೋರಾಟ ಮಾಡುವ ಪರಿಸ್ಥಿತಿ ಇಂದು ದೇಶಕ್ಕೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಶತಮಾನಗಳಿಂದಲೂ ನಮ್ಮ ಹಿಂದು ಧರ್ಮದ ಮೇಲೆ ನಿರಂತರ ದಾಳಿ ನಡೆಯುತ್ತಲೇ ಇದೆ. ಧರ್ಮ ರಕ್ಷಣೆಗಾಗಿ ದೇಶದೊಳಗಿರುವ ಅರಬ್ಬಿ, ಬ್ರಿಟಿಷ್ ಮನಸ್ಥಿತಿಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.

    ಮೊಘಲರ ಕಾಲದಲ್ಲಿ ಶಿವಾಜಿ, ಸ್ವಾಂತತ್ರ್ಯ ಹೊರಾಟದ ಸಂದರ್ಭದಲ್ಲಿ ಬಾಲ ಗಂಗಾಧರ್ ತಿಲಕ್ ಹಾಗು ವೀರ ಸಾರ್ವಕರ್ ಗಣೇಶೋತ್ಸವ ಆಚರಣೆ ಮೂಲಕ ಹಿಂದುಗಳನ್ನು ಒಗ್ಗೂಡಿಸುತ್ತಿದ್ದರು. ಇಂದು ಮತ್ತೆ ಜಾತಿ ಹೆಸರಿನಲ್ಲಿ ಹರಿದು ಹಂಚಿ ಹೊಗಿರುವ ಹಿಂದುಗಳನ್ನು ಒಗ್ಗೂಡಿಸಲು ಹಿಂದು ಮಹಾ ಗಣಪತಿ ಹೆಸರಲ್ಲಿ ಸಂಘಟಿತರಾಗುತ್ತಿದ್ದೇವೆ. ಯಾವಾಗ ಹಿಂದು ಧರ್ಮಕ್ಕೆ ಕಂಠಕ ಬರುತ್ತದೆಯೋ ಅಂದು ಗಣೇಶ ನಮ್ಮನ್ನು ರಕ್ಷಣೆ ಮಾಡುತ್ತಾನೆ ಎಂದರು.

    ಮತಾತಂರ ಸ್ಲೋ ಪಾಯಿಸನ್
    ಮತಾಂತರ ಸ್ಲೋ ಪಾಯಿಸನ್ ರೀತಿ ಕೆಲಸ ಮಾಡುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಮಕ್ಕಳು ನಮಗೇ ಕಂಠಕಪ್ರಾಯರಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬ ಪಾಲಕರೂ ಮಕ್ಕಳ ಚಲನವಲನದ ಬಗ್ಗೆ ಅಗತ್ಯ ಗಮನ ಹರಿಸಬೇಕು. ದಾರಿ ತಪ್ಪುವಂತಿದ್ದರೆ ಸೂಕ್ತ ಮಾರ್ಗದರ್ಶನ ನೀಡಿ, ಮನವರಿಕೆ ಮಾಡಿಕೊಟ್ಟು ಸರಿ ದಾರಿಯಲ್ಲಿ ನಡೆಸಬೇಕಿದೆ ಎಂದು ಚೈತ್ರಾ ಕುಂದಾಪುರ ಸಲಹೆ ನೀಡಿದರು.
    ಗಣೇಶ ಮಹೋತ್ಸವ ಮೂಲಕ ಒಗ್ಗೂಡಿಸುವ ಕೆಲಸ
    ಇತಿಹಾಸ ಓದದವರು ಎಂದಿಗೂ ಇತಿಹಾಸವನ್ನು ರಚಿಸಲಾರ. ಇಂದು ಯುವ ಪೀಳಿಗೆಗೆ ಸ್ವಾಭಿಮಾನ, ದೇಶ ಪ್ರೇಮ ಮತ್ತು ಸಂಘಟನೆ ಬಗ್ಗೆ ತಿಳಿಸಬೇಕಿದೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುವುದನ್ನು ತಡೆಯಬೇಕಿದೆ. ಗಣೇಶ ಮಹೋತ್ಸವ ಆಚರಣೆ ಮೂಲಕ ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮೊದಲಿನಿಂದಲೂ ಬಂದಿದೆ ಎಂದು ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿದರು.

    ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ.ವಿರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಮಿತಿಯ ರಟ್ಟಿಹಳ್ಳಿ ಮಂಜುನಾಥ್, ಸ್ವಾತಿ ಹನುಮಂತಪ್ಪ, ಎಚ್.ದಿನೇಶ್, ಬಸವನಗೌಡ, ನಗರಸಭೆ ಸದಸ್ಯ ಎ.ಬಿ.ವಿಜಯಕುಮಾರ್, ರಾಘವೇಂದ್ರ ಉಪಾದ್ಯಾಯ, ಅಜೀತ್ ಸಾವಂತ್, ಮಹೇಶ್, ವಾಸು ಚಂದಾಪೂರ, ಕಾರ್ತಿಕ್, ಸುನೀಲ್ ಕುಮಾರ್, ಮಲ್ಲಿಕಾರ್ಜುನ, ವಿನಾಯಕ ಆರಾಧ್ಯ ಮಠ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts