More

    ಕೃನಾಲ್-ಹಾರ್ದಿಕ್ ಪಾಂಡ್ಯ ಸಹೋದರರಿಗೆ ಪಿತೃವಿಯೋಗ

    ವಡೋದರ: ಟೀಮ್ ಇಂಡಿಯಾದ ಆಲ್ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಸಹೋದರರ ತಂದೆ ಹಿಮಾಂಶು (71 ವರ್ಷ) ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು. ಸಹೋದರರು ಕ್ರಿಕೆಟ್ ಬದುಕಿನಲ್ಲಿ ಕಂಡ ಏಳ್ಗೆಗೆ ಹಿಮಾಂಶು ಅಪಾರವಾದ ಕೊಡುಗೆಗಳನ್ನು ನೀಡಿದ್ದರು.

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡ ತಂಡವನ್ನು ಮುನ್ನಡೆಸುತ್ತಿದ್ದ ಕೃನಾಲ್ ಪಾಂಡ್ಯ, ತಂದೆಯ ನಿಧನದ ಹಿನ್ನೆಲೆಯಲ್ಲಿ ಟೂರ್ನಿಯ ಬಯೋ-ಬಬಲ್ ತೊರೆದು ನಿರ್ಗಮಿಸಿದ್ದಾರೆ. ಈ ಟೂರ್ನಿಯಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಮುಂಬರುವ ಇಂಗ್ಲೆಂಡ್ ವಿರುದ್ಧದ ತವರಿನ ಸೀಮಿತ ಓವರ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದರು.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತಂದ ಅನಿರುದ್ಧ ಜೋಶಿ

    ಪಾಂಡ್ಯ ಸಹೋದರರ ಸಹ-ಆಟಗಾರರು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬರೋಡದವರೇ ಆದ ಮಾಜಿ ಆಲ್ರೌಂಡರ್‌ಗಳಾದ ಇರ್ಫಾನ್-ಯೂಸುಫ್​ ಪಠಾಣ್ ಸಹೋದರರು, ಕನ್ನಡಿಗರಾದ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಮತ್ತಿತರರು ಪಾಂಡ್ಯ ಸಹೋದರರಿಗೆ ಸಾಂತ್ವಾನ ಹೇಳಿದ್ದಾರೆ.

    ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರದಿದ್ದ ಹಾರ್ದಿಕ್ ಪಾಂಡ್ಯ ಶಾಲೆಯನ್ನೇ ತೊರೆದು ಕ್ರಿಕೆಟ್‌ನತ್ತ ಸಂಪೂರ್ಣ ಗಮನಹರಿಸಲು ಮುಂದಾದಾಗ ಹಿಮಾಂಶು ಸಂಪೂರ್ಣ ಬೆಂಬಲ ನೀಡಿದ್ದರು. ಇದಕ್ಕಾಗಿ ಸಂಬಂಧಿಕರಿಂದ ತೀವ್ರವಾದ ಟೀಕೆಗಳನ್ನು ಎದುರಿಸಿದ್ದರು. ಈಗ ಮಕ್ಕಳು ಕ್ರಿಕೆಟ್‌ನಲ್ಲಿ ತೋರುತ್ತಿರುವ ಸಾಧನೆಯ ಬಗ್ಗೆ ಹೆಮ್ಮೆ ಇದೆ ಎಂದು ಹಿಮಾಂಶು ಹಿಂದೊಮ್ಮೆ ಹೇಳಿಕೊಂಡಿದ್ದರು. ಪಾಂಡ್ಯ ಸಹೋದರರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ಬಳಿಕ ಕ್ರಿಕೆಟ್ ಬದುಕಿನಲ್ಲಿ ಸಾಕಷ್ಟು ಯಶಸ್ಸು, ಹಣ ಸಂಪಾದನೆಯನ್ನು ಕಂಡಿದ್ದಾರೆ.

    2020ರಲ್ಲಿ ಹಾರ್ದಿಕ್ ಪಾಂಡ್ಯರ ನಿಶ್ಚಿತಾರ್ಥ-ಮದುವೆ ಮತ್ತು ಮಗುವಿನ ಆಗಮನದಂಥ ಸುಂದರ ಕ್ಷಣಗಳನ್ನು ಕಂಡಿದ್ದ ಪಾಂಡ್ಯ ಕುಟುಂಬಕ್ಕೆ 2021 ಉತ್ತಮ ಆರಂಭವನ್ನು ಒದಗಿಸಿಕೊಡದಿರುವುದು ವಿಪರ‌್ಯಾಸವಾಗಿದೆ.

    ದೇಶೀಯ ಟಿ20ಯಲ್ಲಿ ಮಿಂಚುತ್ತಿದ್ದಾರೆ ಕೇದಾರ್ ಜಾಧವ್, ಸಿಎಸ್‌ಕೆ ಫ್ಯಾನ್ಸ್ ಏನಂದರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts