More

    ಬೆಳಗಾವಿ : ಸಂಕಷ್ಟ ಎದುರಿಸುವ ಸಾಹಿತ್ಯ ರಚಿಸಿ

    ಬೆಳಗಾವಿ: ಭಾವನಾತ್ಮಕ ಸಂಬಂಧಗಳನ್ನು ಪದಗಳಲ್ಲಿ ಹಿಡಿದಿಟ್ಟುಕೊಳ್ಳವುದನ್ನು ಹಿರಿಯ ಕವಿಗಳು ತಿಳಿಸಿಕೊಟ್ಟಿದ್ದಾರೆ. ಇದೀಗ ದುಃಖ ಹಾಗೂ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವಂತಹ ಸಾಹಿತ್ಯ ರಚನೆಯಾಗಬೇಕಿದೆ ಎಂದು ಲೇಖಕಿ ಸುಮಾ ಕಿತ್ತೂರ ಅಭಿಪ್ರಾಯಪಟ್ಟರು.

    ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ರಾಜಶೇಖರ ಕಿತ್ತೂರ ಮತ್ತು ದಿ. ಕಾಶವ್ವ ಮುರಿಗೆಪ್ಪ ಬುರಲಿ ಅವರ ಸ್ಮರಣಾರ್ಥ ಇಲ್ಲಿನ ಸಾಹಿತ್ಯ ಭವನ ಸಭಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಜಾನಪದ- ಭಾವಗೀತೆಗಳ ಭಾವಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಎಲ್ಲರೂ ನಮ್ಮವರೇ ಎನ್ನುವ ಕಾಲವೊಂದಿತ್ತು. ಆದರೆ, ಇಂದಿನ ದಿನಗಳಲ್ಲಿ ಅಂಥ ಭಾವನಾತ್ಮಕ ಸಂಬಂಧಗಳು ಶಿಥಿಲಗೊಳ್ಳುತ್ತಿವೆ ಎಂದರು. ನೀಲಗಂಗಾ ಚರಂತಿಮಠ, ಆಶಾ ಕಡಪಟ್ಟಿ, ಶ್ವೇತಾ ನರಗುಂದ, ಸುನಂದಾ ಎಮ್ಮಿ, ದೀಪಿಕಾ ಚಾಟೆ, ಸುನಂದ ಮುಳೆ ಅವರು ರಚಿಸಿದ ಕವಿತೆಗಳನ್ನು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ತಾಯಿ ಪ್ರೀತಿಗೆ ವಿಶೇಷತೆ: ತಾಯಿ ದಿ. ಕಾಶವ್ವ ಮುರಗೆಪ್ಪ ಬುರಲಿಯವರ ಸ್ಮರಣಾರ್ಥ ಲೇಖಕಿಯರ ಸಂಘಕ್ಕೆ ದತ್ತಿನಿಧಿ ನೀಡಿರುವ ಲೇಖಕಿ ಸುನಂದಾ ಎಮ್ಮಿ ಮಾತನಾಡಿ, ಮಕ್ಕಳ ಮೇಲೆ ಎಲ್ಲ ತಾಯಂದಿರ ಪ್ರೀತಿ ಒಂದೇ ಆಗಿರುತ್ತದೆ. ಅಣ್ಣ- ತಮ್ಮ, ಅಕ್ಕ- ತಂಗಿ, ಗಂಡ- ಹೆಂಡತಿ ಹೀಗೆ ಎಲ್ಲ ಸಂಬಂಧಗಳ ನಡುವಿನ ಪ್ರೀತಿಯಲ್ಲಿ ಬದಲಾವಣೆ ಕಾಣುತ್ತೇವೆ. ಬದಲಾಗದ ಪ್ರೀತಿಯೆಂದರೆ ಹೆತ್ತ ತಾಯಿಯದ್ದು ಮಾತ್ರ. ಹೀಗಾಗಿಯೇ ಜಾನಪದ ಸಾಹಿತ್ಯದಲ್ಲಿ ತಾಯಿ ಪ್ರೀತಿಗೆ ವಿಶೇಷ ಸ್ಥಾನವಿದೆ ಎಂದರು.

    ಜ್ಯೋತಿ ಬದಾಮಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಕಡಪಟ್ಟಿ, ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ, ಸುನೀತಾ ನಂದೆಣ್ಣವರ, ಶಾಲನಿ ಚಿನವಾರ, ನೈನಾ ಗಿರಗೌಡರ, ದೀಪಿಕಾ ಚಾಟೆ, ಉಮಾ ಅಂಗಡಿ, ಆಶಾ ಯಮಕನಮರಡಿ, ಹಮೀದಾ ಬೇಗಂ ದೇಸಾಯಿ, ಶ್ವೇತಾ ನರಗುಂದ, ಸುಪ್ರಿಯಾ ದೇಶಪಾಂಡೆ, ಮಹಾನಂದಾ ಪರುಶೆಟ್ಟಿ, ಸುಮಾ ಬೇವಿನಕೊಪ್ಪ, ರುದ್ರಾಂಬಿಕಾ ಯಾಳಗಿ, ರಾಜನಂದಾ ಘಾರ್ಗಿ, ಡಾ. ಹೇಮಾ ಸೊನೊಳ್ಳಿ, ಸುಧಾ ಪಾಟೀಲ, ಪದ್ಮಾ ಹೊಸಕೋಟಿ, ಇಂದಿರಾ ಮೇಟೆಬೆನ್ನೂರ, ಡಾ. ನಿರ್ಮಲಾ ಬಟ್ಟಲ ಇದ್ದರು. ಪ್ರಭಾ ಪಾಟೀಲ, ಮಂಗಲಾ ಕಾಕತೀಕರ, ದಾನಮ್ಮ ಅಂಗಡಿ, ಅನ್ನಪೂರ್ಣಾ ಹತ್ತರಕಿ ಗೀತಗಾಯನ ಮಾಡಿದರು. ಆಶಾ ಸಂಸುದ್ದಿ ಪ್ರಾರ್ಥಿಸಿದರು. ಸುನಂದಾ ಮುಳೆ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು. ಉಮಾ ಅಂಗಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts