More

    ಕಠಿಣ ಶ್ರಮವೇ ಸಾಧನೆಗೆ ಕೀಲಿಕೈ

    ನಿಪ್ಪಾಣಿ: ಜೀವನ, ಬದುಕು, ವಿದ್ಯಾಭ್ಯಾಸ ಮೊದಲಾದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದು ನನ್ನ ಕರ್ತವ್ಯ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಹೇಳಿದರು.

    ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ 65ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ಕನ್ವೆನ್ಶನ್ ಹಾಲ್‌ನಲ್ಲಿ ‘ಬೆಳೆಯುತ್ತಿರುವ ಭಾರತದಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಸಮಾಜ, ಯುವಪೀಳಿಗೆ, ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಕನಸಿನ ಜತೆಗೆ ಕಠಿಣ ಪರಿಶ್ರಮದಿಂದ ಅಭ್ಯಸಿಸಬೇಕು. ನೋಡುವ ಚಿತ್ರ, ಕೇಳುವ ಹಾಡು, ಓದುವ ಕತೆ ಜೀವನ ನಿರ್ಮಾಣ ಮಾಡುವಂತಿರಬೇಕು. ಸಾಧನೆಗೆ ಹೊರಟವರು ಮೊಬೈಲ್ ಗೀಳಿನಿಂದ ದೂರ ಇರಬೇಕು. ಓದುವ ಹುಚ್ಚುತನವಿರಬೇಕು. ವಿದ್ಯಾ ಸಂವರ್ಧಕ ಮಂಡಳದ ಶೈಕ್ಷಣಿಕ ಕಾರ್ಯ ಶ್ಲಾಘನೀಯ ಎಂದರು.

    ಉಪಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿ, ಇಲ್ಲಿ ವಿದ್ಯಾಭ್ಯಾಸ ಪಡೆದು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಸಿಇಒ ಡಾ.ಸಿದ್ಧಗೌಡ ಪಾಟೀಲ ಮಾತನಾಡಿದರು. ವಿಎಸ್‌ಎಂಎಸ್‌ಆರ್‌ಕೆಐಟಿ ಪ್ರಾಚಾರ್ಯ ಡಾ.ಉಮೇಶ ಪಾಟೀಲ, ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಸಂಚಾಲಕ ಚಂದ್ರಕಾಂತ ತಾರಳೆ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ್ ಬಾಗೇವಾಡಿ, ಅವಿನಾಶ ಪಾಟೀಲ, ಶೇಖರ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀಣ ಪಾಟೀಲ, ಗಣೇಶ ಖಡೇದ, ಬಿಇಒ ಮಹಾದೇವಿ ನಾಯಿಕ, ಶುಗರ್ ೆಡರೇಷನ್ ಅಧ್ಯಕ್ಷ ವಿಶ್ವನಾಥ ಕಮತೆ, ರಾಜೇಶ ಚೌಗುಲಾ, ನಿತಿನ ಮಾಳಿ, ಪ್ರಾಚಾರ್ಯರಾದ ಬಸವರಾಜ ಕರೋಶಿ, ಚಿದಂಬರ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts