More

    ಕಠಿಣ ಪರಿಶ್ರಮ, ನಿರಂತರ ಅಭ್ಯಾಸವಿರಲಿ

    ಬೆಟ್ಟದಪುರ: ಕಠಿಣ ಪರಿಶ್ರಮ, ನಿರಂತರ ಅಭ್ಯಾಸವಿದ್ದರೆ ಮಾತ್ರ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯಲು ಸಾಧ್ಯ ಎಂದು ಬೆಂಗಳೂರಿನ ಅಬಕಾರಿ ಇಲಾಖೆ ಉಪಅಧೀಕ್ಷಕ ಎಸ್.ಧರಣಿಕುಮಾರ್ ಕಿವಿಮಾತು ಹೇಳಿದರು.

    ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ, ಆಧುನಿಕ ಜಗತ್ತನ್ನು ಆಳ್ವಿಕೆ ಮಾಡುತ್ತಿರುವುದು ಜ್ಞಾನ ಹೊರತು ರಾಜಕೀಯವಲ್ಲ, ಹಣವಲ್ಲ. ಶಿಕ್ಷಣದಿಂದ ಸ್ವಾವಾಲಂಭಿಯಾಗಿ ಜೀವನ ನಡೆಸಲು ಸಾಧ್ಯ. ವಿದ್ಯೆ ಕಲಿತವನಿಗೆ ಎಲ್ಲಿಯಾದರೂ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದರು.

    ಜೀವನದಲ್ಲಿ ಕನಸು ಕಾಣಬೇಕು. ಆ ಕನಸು ಯಾವ ಮಟ್ಟಕ್ಕೆ ಇರಬೇಕು ಎಂದರೆ ಎಂಥ ಗಾಢವಾದ ನಿದ್ದೆಯಲ್ಲಿ ಇದ್ದರು. ನಮ್ಮನು ಬಡಿದು ಎಚ್ಚರಿಸಬೇಕು. ಗುರಿ ಇಟ್ಟುಕೊಂಡು ಛಲದಿಂದ ಸಾಗಿದರೆ ಖಂಡಿತವಾಗಿಯೂ ಯಶಸ್ಸು ಕಾಣಬಹುದು. ಮೊಬೈಲ್ ಗೀಳಿಗೆ ಬಲಿಯಾಗದೇ ನಿಮ್ಮ ಸುತ್ತಮುತ್ತಲಿನಲ್ಲಿಯೇ ಹಲವಾರು ಜನರು ಐಎಎಸ್, ಕೆಎಎಸ್, ಪೊಲೀಸ್, ಜಡ್ಜ್ ಹೀಗೆ ಹತ್ತು ಹಲವಾರು ಹುದ್ದೆಗಳನ್ನು ಅಲಂಕಾರ ಮಾಡಿದ್ದಾರೆ. ಅಂತವರನ್ನ ಆದರ್ಶವಾಗಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

    ಸನ್ಮಾನ: ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅಬಕಾರಿ ಉಪ ಅಧೀಕ್ಷಕ ಎಸ್.ಧರಣಿಕುಮಾರ್ ಮತ್ತು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ವರ್ಗಾವಣೆಯಾಗಿರುವ ಉಪನ್ಯಾಸಕ ಲೋಕೇಶ್ ಅವರನ್ನು ಸನ್ಮಾನಿಸಲಾಯಿತು.

    ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕುಂಜಪ್ಪ ಕಾರ್ನಾಡ್, ಸದಸ್ಯರಾದ ಅನಿತಾ ತೋಟಪ್ಪಶೆಟ್ಟಿ, ಕುಮಾರಸ್ವಾಮಿ, ರಜಿನಿಕಾಂತ್, ಮನು, ರಕ್ಷಿತ್, ದಿಲೀಪ್‌ಕುಮಾರ್, ಪ್ರಾಂಶುಪಾಲ ಜ್ಯೋತಿ ಪ್ರಸಾದ್, ಉಪನ್ಯಾಸಕರಾದ ಲೋಕೇಶ್, ರಮೇಶ್‌ಕುಮಾರ್, ಬಿ.ಎಸ್ ದಿವ್ಯಾ, ರಾಜು, ಅಶ್ವಿನಿ, ಅಭಿಜಿತ್, ಲೋಕೇಶ್, ನವೀನ್‌ಕುಮಾರ್, ಕುಮಾರ್, ಸೃಜನ್, ಮೊಹಮ್ಮದ್ ಖಾದಿಲ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts